
ಇಂದಿನ ದಿನ ಸುದಿನಾ
ನಾಳೆ ಎಂಬುದು ಬಲು ಕಠಿಣ ||ಇಂದಿನ||
ಮಂದಮತಿಯೆ ನಿನಗಾಗಲೋ ಈಗಲೋ ||೨||
ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨|| ||ಇಂದಿನ ||
ಸಾಧು ಸಜ್ಜನರಿಂದ ಪಾಪವು
ಛೇದನವಾಗುವುದು ||ಸಾಧು||
ಈಗಲೊ ಆಗಲೊ ಇನ್ಯಾವಾಗಲೋ ||೨||
ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨|| ||ಇಂದಿನ||
ಯೋಗಿಗಳೊಡನಾಡಿ ವಿಷಯದ
ಭೋಗವನೀಡಾಡಿ ||ಯೋಗಿ||
ಈಗಲೊ ಆಗಲೊ ಇನ್ಯಾವಾಗಲೋ||೨||
ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨|| ||ಇಂದಿನ||
ಅಸ್ಥಿರ ದೇಹವಿದು
ನಾನಾ ಅವಸ್ಥೆ ಆಗದಿರದೂ||ಅಸ್ಥಿರ||
ಕಸ್ತೂರಿರಂಗನ ಪುರಂದರವಿಠ್ಠಲನ||೨||
ಅಸ್ತಮಾನ ಬಿಡನೊಡನಾಡುವುದಕೆ ||೨|| ||ಇಂದಿನ||
Lyrics in English
Indina Dina sudina
nale embodu balu katina ||
Mandamatiye ninagagalo eegalo |
govindana nama smarane maduvudake || indina ||
Sadhu sajjanarinda papavu
chedanavaguvudu ||
eegalo agalo inyavagalo
govindana namasmarane maduvudake ||
Yogigalodanadi vishayada
bhogavaneedadi ||
eegalo agalo inyavagalo
govindana namasmarane maduvudake ||
Astira dehavidu
nana avaste agadiradoo ||
kasturirangana purandaravittalana |
astamana bidanodanaduvudake ||