ಇರಬೇಕು ಹರಿದಾಸರ ಸಂಗ / Irabeku haridasara sanga

ಇರಬೇಕು ಹರಿದಾಸರ ಸಂಗ
ವರಜ್ಞಾನಿಗಳ ದಯ ಸಂಪಾದಿಸಬೇಕು |ಪ|

ಅತಿಜ್ಞಾನಿಯಾಗಿ ಹರಿಕಥೆಯ ಕೇಳಬೇಕು
ಯತಿಗಳ ಪಾದಕ್ಕೆ ಎರಗಬೇಕು
ಸತಿ ಸುತರಿದ್ದು ಮಮತೆಯನು ಬಿಡಬೇಕು
ಗತಿಯೆಂದು ಬಿಡದೆ ಹರಿಯ ಪೋಪರಸಂಗ |1|

ನಡೆ ಯಾತ್ರಿಯನಬೇಕು ನುಡಿ ನೇಮವಿರಬೇಕು
ಬಿಡದೆ ಹರಿಯ ಪೂಜೆಯ ಮಾಡಬೇಕು
ಅಡಿಗಡಿಗೆ ಬಂದು ಹರಿಗಡ್ಡ ಬೀಳಬೇಕು
ಬಿಡದೆ ಹರಿ ಭಜನೆಯ ಮಾಡುವರ ಸಂಗ |2|

ಹರಿ ಹರ ವಿರಂಚಿಯರ ಪರಿಯ ತಿಳಿಯಬೇಕು
ತರತಮದಿ ರುದ್ರ ಇಂದ್ರಾದಿಗಳ
ಅರಿಯದಿದ್ದರೆ ಗುರುಹಿರಿಯರ ಕೇಳಬೇಕು
ಪರಮಾನಂದದಲಿ ಓಲಾಡುವರ ಸಂಗ |3|

ಷಟ್ಕರ್ಮ ಮಾಡಬೇಕು ವೈಷ್ಣವನೊಲಿಸಬೇಕು ಉತ್ಕಷ್ಟ ವೈರಾಗ್ಯಬೇಕು ದುಷ್ಟಸಂಗ ಬಿಡಬೇಕು
ವಿಷ್ಣುವಿನ ದಾಸರ ದಾಸನಾಗಲುಬೇಕು
ಎಷ್ಟು ಕಷ್ಟಬಂದರೂ ಹರಿಯ ಭಜಿಪರ ಸಂಗ |4|

ಏಕಾಂತ ಕುಳ್ಳಿರಬೇಕು ಲೋಕವಾರ್ತೆ ಬಿಡಬೇಕು
ಲೋಕೈಕನಾಥನ ಭಜಿಸಬೇಕು
ಸಾಕು ಸಂಸಾರವೆಂದು ಕಕ್ಕುಲತೆ ಬೀಡಬೇಕು
ಶ್ರೀಕಾಂತ ಪುರಂದರ ವಿಠಲರಾಯನ ಸಂಗ |5|

Lyrics in English

Irabeku haridasara sanga vara jnanigala daya sampadisa beku ||

Ati jnaniyagi harikatheya kelabeku |yatigala padakke eragabeku|
sati sutariddu mamateyanu bidabeku| gatiyendu bidade hari poparara sanga ||1||

Nade yatreyenabeku nudi nemavira beku | bidade hari pujeya madabeku| adigadige bandu harigadda beelabeku |bidade hari bhajaneya maduvara sanga ||2||

Hari hara virinchigala pariya tiliyalu beku |taratamadi rudra indraadigala
ariyadiddare guru hariyara kelabeku paramanandadi oladuvara sanga ||3||

Sadkarma madabeku vaishnavanolisa beku |utkrishta vairagya beku dushta sanga bida beku | vishnuvina dasara dasanaga beku | eshtu kashta bandaru vishnu bhajipara sanga ||4||

Ekanta kullirabeku lokavarte bidabeku | lokaikanathana bhajisa beku
saaku samsaravendu kakulati bidabeku shrikanta purandara vittala dasara sanga ||5||


Leave a Reply