ಎಲ್ಲಿರುವನೋ ರಂಗ ಎಂಬ / Elliruvano ranga emba

ರಚನೆ : ಶ್ರೀ ಕನಕದಾಸರು

ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ                 ।।ಪ॥ 

ಎಲ್ಲಿ ಭಕ್ತರು ಕರೆಯೆ ಅಲ್ಲಿ ಬಂದೊದಗುವನು                 ।।ಅ.ಪ॥ 

ತರಳ ಪ್ರಹ್ಲಾದ ಹರಿ ವಿಶ್ವಮಯನೆಂದು
ಭರದೊದೆಯಲವನ ಪಿತ ಕೋಪದಿಂದ
ಸ್ಥಿರವಾದೊಳಿ ಕಂಭದಲಿ ತೋರು ತೋರೆನಲು
ಭರದಿಂದ ಬರಲದಕೆ ವೈಕುಂಠ ನೆರೆಮನೆಯೇ               ।।೧।।

ಕುರುಪತಿಯು ದ್ರೌಪದಿಯ ಸೀರೆಯನು ಸೆಳೆಯುತಿರೆ
ತರುಣಿ ಹಾ ಕೃಷ್ಣ ಎಂದರೆ ಕೇಳ್ದು
ಭರದಿಂದ ಅಕ್ಷಯಾಂಬರವೀಯೆ ಹಸ್ತಿನಾ
ಪುರಿಗೆ ದ್ವಾರಾವತಿಯು ಕೂಗಳತೆಯೇ                      ।।೨।।

ಅಣುಹೊತ್ತಿನೊಳೆಲ್ಲ ಪರಿಪೂರ್ಣ ವಿಶ್ವಮಯ
ಗಣನೆಯಿಲ್ಲದ ಮಹಾಮಹಿಮನೆನಿಪ
ಘನ ಕೃಪಾನಿಧಿ ಕಾಗಿನೆಲೆಯಾದಿ ಕೇಶವನು
ನೆನೆವರ ಮನದೊಳಿಹನೆಂಬ ಬಿರುದುಂಟಾಗಿ                 ।।೩।।

Lyrics in English

Elliruvano ranga emba samshaya beda ||pa||

Elli bhaktaru alli bandodaguvanu. ||a.pa||

Tarala prahlada hari vishwamayanendu |
bharadodeyalavana pita kopadinda |
stiravaadoli kambhadali toru torenalu |
bharadinda baraladake vaikunta neremaneye ||1||

Kurupatiyu draupadiya seereyanu seleyutire |
taruni haa krishna endare keldu |
bharadinda akshayaambaraveeye
hastinapurige dwaravatiyu koogalateye ||2||

Anuhottinolella paripurna vishwamaya |
gananeyillada mahamahimanenipa
ghana krupanidhi kagineleyaadi keshavanu |
nenevara manadolihanemba biruduntaagi

——————–

by M.S.Sheela

By Vidyabhushana Theertha

This Post Has 0 Comments

  1. Savitha K V

    ದಯವಿಟ್ಟು ತಪ್ಪು ತಪ್ಪು ಸಾಹಿತ್ಯ ಹಾಕಬೇಡಿ. ಅದೂ ಅಲ್ಲದೆ ಈ ದೇವರ ನಾಮ ಪುರಂದರ ದಾಸರ ರಚನೆ. ನೀವು ಕನಕದಾಸರ ಅಂಕಿತ ಹಾಕಿದ್ದೀರಿ.

    1. Suchetha Rao
      Suchetha Rao

      ಸಾಹಿತ್ಯ ತಪ್ಪಾಗಿದ್ದಲ್ಲಿ ಕ್ಷಮಿಸಿ. ನನ್ನ ಭಜನಾ ಪುಸ್ತಕದಲ್ಲಿ ಇರುವಂತೆ ಹಾಕಿದ್ದೇನೆ. ಶ್ರಿ ವಿದ್ಯಾಭೂಷಣರು ಇದರಂತೆಯೇ ಹಾಡಿದ್ದಾರೆ. ಅದರಲ್ಲಿ ಕನಕದಾಸರ ಅಂಕಿತವಿದೆ. ತಮ್ಮಲ್ಲಿ ಇರುವ ಸಾಹಿತ್ಯವನ್ನು ಕಳುಹಿಸಿ. ಅದನ್ನು ಹಾಕುತ್ತೇನೆ.

Leave a Reply