ಏಕೆ ಮಲಗಿಹೆ ಹರಿಯೆ / Eke malagihe hariye

ಏಕೆ ಮಲಗಿಹೆ ಹರಿಯೆ ಏಸು ಆಯಾಸ
ಜೋಕೆಮಾಡುವ  ಬಿರುದು ಸಾಕಾಯಿತೇನೊ।।ಪ।।

ತಮನೊಡನೆ ಹೋರಾಡಿ ತಪಿಸಿ ಮೈ ಬೆವರಿತೊ
ಅಮೃತಮಥನದಿ ಗಿರಿಯು ಅತಿಭಾರವಾಯ್ತೊ
ರಮಣಿಯನು ತರುವಾಗ ರಣರಂಗ ಬಹಳಾಯ್ತೊ
ಅಮರರಿಪುವನು ಸೀಳೆ ಕರ ಸೋತಿತೊ     ।।೧।।

ಆಕಾಶ ಭೇದಿಸಲು ಆ ಕಾಲು ಉಳುಕಿತೊ
ಕಾಕುನೃಪರನು ಸೀಳಿ ಕರ ಸೋತಿತೊ
ಭೂದೇವಿಯನರಸಿ ಬಳಲಿಕೆಯು ಬಹಳಾಯ್ತೊ
ಲೋಕಭಾರವ ಇಳುಹಿ ಸಾಕು ಸಾಕಾಯ್ತೊ   ।।೨।।

ಚಪಲೆಯರ ಮೋಹಿಸಲು ಉಪಟಳವು ಬಹಳಾಯ್ತೊ
ಅಪವಿತ್ರನಡಗಿಸಲು ಅಧಿಕ ಶ್ರಮವಾಯ್ತೊ
ಕೃಪೆಮಾಡಿ ನೋಡಯ್ಯ ಕಣ್ಣು ತೆರೆದು ಎನ್ನಕಡೆ
ಕಪಟನಾಟಕ ಶ್ರೀ ಗೋಪಾಲವಿಠಲ           ।।೩।।

Lyrics in English

Eke malagihe hariye esu ayasa
Jokemaduva birudu sakayiteno ||pa||

Tamanodane horadi tapisi mai bevarito |
amrutamathanadi giriyu atibaravayto
ramaniyanu taruvaga ranaranga bahalayto
amararipuvanu sile kara sotito ||1||

Akasha bedisalu a kaalu ulukito|
kaakunruparanu sili kara sotito |
budeviyanarasi balalikeyu bahalayto
lokabharava iluhi saakusakayto ||2||

Chapaleyara mohisalu upatalavu bahalayto |
apavitranadagisalu adhika shramavayto |
krupemadi nodayya kannu teredu ennakade
Kapatanataka sri gopalavithala ||3||


Leave a Reply