
ಏನು ಕಾರಣ ಬಾಯ ತೆರದಿ ಪೇಳೆಲೊ
ದಾನವಾಂತಕ ಅಹೋಬಲ ನಾರಸಿಂಹನೆ ll ಪ ll
ನಿಗಮಚೋರನ ಕೊಲಲು ತೆರೆದೆಯೊ ಬಾಯ
ನಗವ ಬೆನ್ನಲಿ ಪೊತ್ತು ನಡುಗಿ ತೆರೆದೆಯೊ ಬಾಯ ಭೂ
ಮಿಗಳ್ಳನ ಕೊಂದು ಬಳಲಿ ತೆರೆದೆಯೊ ಬಾಯ
ಜಗವರಿಯೆ ಪೇರುರವಿರಿದ ಪ್ರಹ್ಲಾದವರದ
ಅಹೋಬಲ ನಾರಸಿಂಹನೆ ll 1 ll
ಬಲಿಯ ದಾನವ ಬೇಡಲೆಂದು ತೆರೆದೆಯೊ ಬಾಯ
ಛಲದಿಂದ ಕ್ಷತ್ರಿಯರ ಕೊಲಲು ತೆರೆದೆಯೊ ಬಾಯ
ಕುಲಸತಿಯ ಅರಸಿ ಕಾಣದೆ ತೆರೆದೆಯೊ ಬಾಯ
ಮಲೆತು ಮಾವನ ಕೊಂದು ನಿಂದೆ ಇಂಥ
ಇಳಿಯಬಾರದ ಭೂಮಿಗಿಳಿದ ನಾರಸಿಂಹ ll 2 ll
ನಾರಿಯರ ಚೆಲ್ವಿಕೆಯ ನೋಡಿ ತೆರೆದೆಯೊ ಬಾಯ
ಏರಿ ಅಶ್ವವ ಮೆಟ್ಟಿ ಅಳಲಿ ತೆರೆದೆಯೊ ಬಾಯ
ಮಾರಪಿತ ಕಾಗಿನೆಲೆಯಾದಿಕೇಶವ ರಂಗ
ಧೀರ ಶ್ರೀನಾಥ ಭವನಾಶ ಪೇಳೊ
ಪೇಳಿಲ್ಲೇತಕೆ ಅಹೋಬಲ ನರಸಿಂಹನೆ ll 3 ll
Lyrics in English
Enu karana baya teradi pelelo
danavantaka ahobala narasimhane ||pa||
Nigamachorana kollalu teredeyo baya
nagava bennali pottu nadugi teredeyo baya
bhumigallana kondu balali teredeyo baya
jagavariye peruravirida prahladavarada
ahobala narasimhane ||1||
Baliya danava bedalendu teredeyo baya
chaladinda kshatriyara kollalu teredeyo baya
kulasatiya arasi kanade teredeyo baya
maletu manava kondu ninde intha
iliyabarada bhumigilida narasimha ||2||
Nariyara chelvikeya nodu teredeyo narasimha
eri ashwava meṭṭila alali teredeyo baya
marapita kagineleyadikeshava ranga
dheera srinatha bhavanasha pelo
pellilletake ahobala narasimhane ||3||