ಕಂಡು ಕಂಡು ನೀ ಎನ್ನ / Kandu kandu nee enna

ರಚನೆ : ಶ್ರೀ ಪುರಂದರ ದಾಸರು

ಕಂಡು ಕಂಡು ನೀ ಎನ್ನ ಕೈ ಬಿಡುವರೇ ಕೃಷ್ಣಾ।।ಪ॥ 

ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ಹರಿ ।।ಅ.ಪ॥ 

ಬಂಧುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ
ನಿಂದೆಯಲಿ ನೊಂದೆನೈ ನೀರಜಾಕ್ಷ
ತಂದೆತಾಯಿಯು ನೀನೆ ಬಂಧುಬಳಗವು ನೀನೆ
ಎಂದೆಂದಿಗೂ ನಿನ್ನ ನಂಬಿದೆನೋ ಕೃಷ್ಣಾ     ।।೧।।

ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ
ಎಣಿಸಲಾರದ ಭವದಿ ಕಡುನೊಂದೆ ನಾನು
ಸನಕಾದಿ ಮುನಿವಂದ್ಯ ವನಜಸಂಭವ ಜನಕ
ಫಣಿಶಾಯಿ ಪ್ರಹ್ಲಾದಗೊಲಿದ ಶ್ರೀಕೃಷ್ಣಾ    ।।೨।।

ಭಕ್ತವತ್ಸಲನೆಂಬೊ ಬಿರುದು ಪೊತ್ತಮೇಲೆ
ಭಕ್ತರಾಧೀನನಾಗಿರಬೇಡವೆ
ಮುಕ್ತಿದಾಯಕ ದೇವ ಪುರಂದರವಿಠಲನೆ 
ಶಕ್ತ  ನೀನಹುದೆಂದು ನಂಬಿದೆನೊ ಶ್ರೀಕೃಷ್ಣಾ ।।೩।।

Lyrics in English

Kandu kandu nee enna kai biduvare
pundarikaaksha shri purushottam hari||

Bandhugalu yenagilla badukinali sukhavilla
nindeyali nondenai nirajaaksha
tandetaayiyu neene bandhubalagavu neene
yendendigu ninna nambideno krishna||1||

Kshanavondu yugavaagi trunakinta kadeyaagi
yenisalaarada bhavadi kadunonde naanu
sanakaadi munivandya vanajasambhava janaka
phanishaayi prahlaada golida shrikrishna||2||

Bhaktavatsalanembo birudu potta mele
bhaktara adheenanaagirabedave
muktidaayaka neenu honnuuru puravaasa
shaktaguru purandara vithala shrikrishna||3||

The song here : by M.S.Sheela

Its by Ranjani Hebbar

 

Leave a Reply