
ಕಂಡೆ ಹರಿಯ ಕಂಡೆ | ದೇವಾದಿ ದೇವ ಧನುಜಾದಿ ವಂದ್ಯ
ಧರಣೇಶನ | ದಿವ್ಯ ಚರಣ ಕಮಲಯುಗವ ||ಕಂಡೆ||
ಪಾವನವಾಯಿತು ಕುಲಕೋಟಿಗಳು ಸ್ಫುಟಿದು ಹೋದವು ಪರಿತಾಪಗಳೂ ||
ಬೇರೇನು ಬೇಕಿಲ್ಲ ಸಾಕು ಇದುವೇ ಅನಂತ ಭಾಗ್ಯ ||ಕಂಡೆ||
ಈ ಜೀವ ಜೊತೆಯಲ್ಲಿ ಪರಮಾತ್ಮ ಕಳೆದು |
ಒಳಗು ಹೊರಗು, ಬೆಳಗುವ ಹಾಗೆ |
ಸಖಿಯರ ಒಡನೆ ಕುಣಿಯುವ ಹರಿಯ |
ಚರಣಕಿಂಕಿಣಿ ನಾದದ ಇಂಪು |
ರಾಗ ಭಾವಗಳು ಬೆಸೆದಿಹ ಸೊಂಪು |
ಮಂದಹಾಸದಲಿ, ನಿಂದಲಾಸ್ಯದಲಿ |
ಕುಣಿದು ಕುಣಿಸೊ ಕಲಾಪವನ್ನೆ ||ಕಂಡೆ||
ಅಸಮಾನ ಕಲೆಗಾರ ಇವನಮ್ಮ ವಿಠ್ಠಲ |
ರಸವಂತ, ಗುಣವಂತ, ಶ್ರಂಗಾರಲೋಲ |
ಯೋಗಿಯೊ, ಭೋಗಿಯೊ ಬಲ್ಲವರಿಲ್ಲ |
ರಸಿಕ ರಂಗನ ಆನಂದಪಿತನ |
ಹಾವ, ಭಾವಗಳ ಒಳಗಿನ ಮರ್ಮ |
ತಿಳಿದು ನಾನಿಂದು, ಪಡೆದನಾನಂದ |
ಪ್ರಣವ ಬೆರೆತ ವಿಹಾರವನ್ನೆ ||ಕಂಡೆ||
Lyrics in English
Kande hariya kande | devadi Deva dhanujadi vandya dharaneshana | Divya charana kamalayugava ||kande ||
Pavanavaayitu kulakotigalu | sputidu hodavu paritapagalu | berenu bekilla saku eduve ananta bhagya || kande ||
Ee jeeva joteyalli paramatma kaledu | olagu horagu belaguva hage | sakhiyara odane kuniyuva hariya | charana kinkini nadada impu | raga bhavagalu besadiha sompu | mandahasadali nindalasyadali | kunidu kuniso kalapavanne || kande ||
Asamana kalegara evanamma vittala | rasavanta, gunavanta, shrungaralola | yogiyo, bhogiyo ballavarilla | Rasika rangana Ananda pitana | hava bhavagala olagina marma | tilidu nanindu padedanaananda | pranava bereta viharavanne || kande ||