
ಕುಸುಮ ಮಾಲೆಯ ತನ್ನಿರೇ ಶ್ರೀ ದೇವಿ ವಿಜಯಲಕ್ಷ್ಮೀಗೆ ।ಪ।
ಕುಂಕುಮಾರ್ಚನೆ ಮಾಡಿರೇ ಶ್ರೀ ಕ್ಷೀರಸಾಗರ ತನಯಗೆ ।।ಅ . ಪ।।
ಆರಂಗ ರಂಜನಿ ವಿಷ್ಣು ಮೋಹಿನಿ ಚಕ್ರಿಣಿ ಶುಭದಾಯಿನಿ …|ಗರುಡವಾಹನ ಹರಿಯರಾಣಿಯೇ ಮಂದಗಾಮಿನಿ ಮಾನಿನಿ। ಕಲ್ಪವೃಕ್ಷದ ಜೊತೆಗೆ ಹುಟ್ಟಿದ ಕಮಲಿನಿ ಕಮಲಾಸಿನಿ | ಚಂದ್ರವದನೇ ಚಂದ್ರಕಾಂತಿಯ ಚಂದಿರನ ನಿಜ ಸೋದರಿ ।।೧।। ।।ಕುಸುಮ।।
ನದಿಯ ಆಡಿ ಬರುವ ಮಂದಮಾರುತ ಹೂನಗೆ ….
ಕಮಲನಾಭನ ಕೈಯ ಹಿಡಿದ ಕರುಣೆ ಕಮಲೆ ಕೋಮಲೆ । ಮಿಂಚುಬಳ್ಳಿಯ ವೇಗದಿಂದಲಿ ನೋಟ ಬದಲಿಸೋ ಚಂಚಲೆ | ಎಂದು ನಮ್ಮನು ಮಕ್ಕಳಂದದಿ ಪೊರೆಯೆ ಮಾತೆಯೇ ಮಂಗಳೇ ।।೨।। ।।ಕುಸುಮ।।
ಮನದೇ ಧೈರ್ಯವ ತುಂಬಿಸಿ ಮುನ್ನಡೆವಲು ನೀ ಕರುಣಿಸೇ | ಬಿಡದೆ ಸಾಹಸ ಹಿಡಿದ ಕಾರ್ಯಾವ ಸಾಧಿಸೋ ಛಲ ತುಂಬಿಸೇ । ಜಯದ ಮಾಲೆಯ ಕೊರಳಿಗೆಂದು ನೀಡಿ ನೀ ಪರಿಪಾಲಿಸೇ
ವಿಜಯಲಕ್ಷ್ಮಿಯೇ ನಿನ್ನ ಪಾದದೇ ಬೇಡುವೆ ಪಥ ತೋರಿಸೇ ।।೩।।
Lyrics in English
Kusuma maaleya tannire sri devi vijayalakshmige|pa|
Kumkumaarchane maadire sri ksheerasagara tanayage||a.pa||
Aranga ranjani vishnu mohini chakrini shubhadaayini…| garudavaahana hariya raaniye mandagaamini maanini| kalpavrukshada jotege huttida kamalini kamalaasini| chandravadane chandrakaantiya chandirana nija sodari||1||
Nadiya aadi baruva mandamaaruta hoonage …. kamalanaabhana kaiya hidida karune Kamale Komale | minchuballiya vegadindali nota badaliso chanchale| endu nammanu makkalandadi poreye maateye mangale||2||
Manade dhairyava tumbisi munnadevalu nee karunise | bidade saahasa hidida kaaryava saadhiso chala tumbise| jayada maaleya koraligendu needi nee paripaalise vijayalakshmiye ninna paadade beduve patha torise||3||