
ರಚನೆ : ಶ್ರೀ ಪುರಂದರ ದಾಸರು
ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ।।ಪ ।।
ಕಷ್ಟಗಳೆಲ್ಲವ ಪರಹರಿಸಿ ಮನ –
-ದಿಷ್ಟಾರ್ಥಗಳನೆಲ್ಲಾ ಕೊಟ್ಟು ರಕ್ಷಿಸುವಂತ ।।ಅ ಪ ।।
ಮಸ್ತಕದಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿಂ ಹೊಳೆವ ಲಲಾಟ
ಶಿಷ್ಟಿಲಿ ಕೊಳಲನೂದುವ ಓರೆನೋಟ
ಕೌಸ್ತುಭ ಎಡಬಲದಲಿ ಓಲಾಟ ||1||
ಮಗಮಘಿಸುವ ಸೊಬಗಿನ ಸುಳಿಗುರುಳು
ಚಿಗುರು ತುಳಸಿ ವನಮಾಲೆಯು ಕೊರಳೊಳು
ಬಗೆ ಬಗೆ ಹೊನ್ನುಂಗುರವಿಟ್ಟ ಬೆರಳು
ಸೊಬಗಿನ ನಾಭಿಯ ತಾವರೆಯರಳು ||2||
ಉಡುದಾರ ಒಡ್ಯಾನ ನಿಕಿಲಾಭರಣ
ಉಡುಗೆ ಪೀತಾಂಬರ ಶತರವಿ ಕಿರಣ
ಕಡಗ ನೂಪುರ ಗೆಜ್ಜೆಗಳನಿಟ್ಟ ಚರಣ
ಒಡೆಯ ಪುರಂದರ ವಿಠಲನ ಕರುಣಾ ||3||
Lyrics in English
Krishnamurti kanna munde nintidantide |p|
kashtagalellava pariharisi mana
dishtarthagalanella kottu rakshisuvanta |a|
Mastakadali manikada kirita
kasturi tilakadi holeva lalata
shishtili kolalanuduva orenota
kaustubha edabaladalli olata |1|
Maghamaghisuva sobagina suligurulu
chiguru tulasi vanamaleya koralu
bagebage honnunguravitta beralu
sobagina nabhiya tavareyaralu |2|
Ududara vadyana sakalabharana
bedagu pitambara shataravi kirana
kadaga noopura gejjegalanitta charana
odeya purandara vittalana karuna|3|
Click the to listen the song by Vidyabhushana Theertha Swamiji : https://youtu.be/cegkFZqhxQ8
I love the lyrics
Keep posting