ಕೊಲ್ಲೂರಿನ ಈ ಮಣ್ಣು ಎನಿತು ಪುಣ್ಯ/ Kollurina e mannu enitu

ಕೊಲ್ಲೂರಿನ ಈ ಮಣ್ಣು ಎನಿತು ಪುಣ್ಯ ಮಾಡಿತೋ| ತಾಯಿ ಪಾದ ಕಮಲ ಸೋಕಿ, ಎನಿತು ಧನ್ಯವಾಯಿತೋ ||ಕೊಲ್ಲೂರಿನ||

ಪಾಶಾಂಕುಷಧಾರಿಣಿ ಪರಶಿವ ಮನಮೋಹಿನಿ, ತ್ರಿಭುವನ ಪಾಲಿನಿ, ಮೂಕಾಂಬಿಕೆ, ನಿನ್ನ ಗರ್ಭ ಗುಡಿಯಲೆನ್ನ ದೀಪ ಮಾಡಿಕೋ| ನಿನ್ನ ಕೊರಳಮಾಲೆಯಾಗಿ ನನ್ನ ಮಾಡಿಕೋ ||

ಮಂಗಳಾ0ಬೆ ಭವಾನಿ ಕರುಣಾ ರಸವಾಹಿನಿ, ತ್ರಿಶೂಲಿನಿ ಹೇ ಜನನಿ ಮೂಕಾಂಬಿಕೆ ನಿನ್ನ ಹಣೆಯ ಕುಂಕುಮವಾಗೆನ್ನ ಮಾಡಿಕೋ, ನಿನ್ನ ಕೈಯ ಕಂಕಣವಾಗೆನ್ನ ಮಾಡಿಕೋ ||

Lyrics in English

Kollurina e mannu enitu punya maadito | taayi paada kamala soki, enitu dhanyavaayito || kollurina||

Paashaankushadharini parashiva manamohini, tribhuvana paalini mukaambike, ninna garbha gudiyalenna deepa maadiko | ninna koralamaaleyaagi nanna maadiko ||

Mangaambe bhavani karuna rasavaahini, trishulini he janani mukaambike ninna kumkumavaagenna maadiko, ninna kaiya kankanavaagenna maadiko ||


Leave a Reply