
ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ ||ಪ||
ಬಾಯ ಮುಚ್ಚ ಬೇಡಿ ನಾರಾಯಣನ ನೆನೆಯಿರೊ || ಅ. ಪ||
ನಿತ್ಯವಿಲ್ಲ ನೇಮವಿಲ್ಲ | ಮತ್ತೆ ದಾನ ಧರ್ಮವಿಲ್ಲ|
ವ್ಯರ್ಥವಾಗಿ ಕೆಡದೆ ಪುರುಷೋತ್ತಮನ ನೆನೆಯಿರೊ ||೧||
ಕದ್ದು ಪುಸಿಯನಾಡಿ ಅವರ | ಬುದ್ಧಿಯಿಂದ ಕೆಡಲು ಬೇಡಿ|
ಬುದ್ಧಿವಂತರಾಗಿ ಅನಿರುದ್ಧನನ್ನು ನೆನೆಯಿರೊ ||೨||
ಭಕ್ತಿ ಕೊಡುವ ಮುಕ್ತಿ ಕೊಡುವ | ಮತ್ತೆ ಸಾಯುಜ್ಯವ ಕೊಡುವ|
ಕರ್ತೃ ನಮ್ಮ ಪುರಂದರವಿಠಲನ್ನ ನೆನೆಯಿರೊ ||೩||
Lyrics in English
Gali banda kaiyalli turikolliro ||pa||
Baaya muccha bedi narayanana neneyiro || a. Pa||
Nityavilla nemavilla | matte dana dharmavilla |
Vyarthavagi kedade purushottamana neneyiro ||1||
Kaddu pusiyanadi avara | buddhiyinda kedalu bedi |
Buddhivantaragi aniruddhanannu neneyiro ||2||
Bakhti koduva mukti koduva | matte koduva |
Kartru namma purandara | vithalanna neneyiro ||3||