
ಗೋವಿಂದ ಹರಿ ಗೋವಿಂದ
ಕೇಶವ ಕೃಷ್ಣ ಜನಾರ್ಧನ।। ।। ಪ ।।
ಮತ್ಸ್ಯಾವತಾರದೊಳಾಡಿದನೇ
ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಚಾಸುಕಾರನಾಗಿ ಬಾಳಿದನೆ
ಮದಹೆಜ್ಜೆ ಹಿರಣ್ಯನ ಸೀಳಿದನೆ ।। ೧।।
ಕುಂಬಿನಿ ದಾನವ ಬೇಡಿದನೆ
ಕ್ಷಾತ್ರರೆಂಬುವನು ಹತ ಮಾಡಿದನೆ
ಅಂಬುದಿಗೆ ಶರ ಹೂಡಿದನೆ
ಕಮಲಾಂಬಕ ಗೊಲ್ಲರೊಲಾಡಿದನೇ ।।೨।।
ವಸುದೇವನುದರದಿ ಪುಟ್ಟಿದನೆ
ಪೊಲ್ಮೆಸೆವ ಧನುಜರೊಡಗುಟ್ಟಿದನೆ
ಎಸವ ಕಾಳಿಂಗನ ಮೆಟ್ಟಿದನೆ
ಭಾದಿಸುವರ ಯಮಪುರ ಕಟ್ಟಿದನೆ।। ೩।।
ಪೂತನಿಯ ಮೈಯ ಸೋಕಿದನೆ
ಮಹಾ ಘಾತದ ಮೊಲೆಯುಂಡು ತೇಗಿದನೆ
ಘಾತಕಿಯನತ್ತಾ ನೂಕಿದನೆ
ಗೋಪವ್ರಾತ ಗೋಗಳನೆಲ್ಲಾ ಸಾಕಿದನೆ ।।೪।।
ಸಾಧಿಸಿ ತ್ರಿಪುರರ ಗೆಲಿದವನೇ
ಲೇಚರ ಭೇದಿಸಿ ಹಯವೇರಿ ಮೆರೆದವನೇ
ಸಾಧಿಸಿ ಸಕಲವ ತಿಳಿದವನೇ
ಬಾಡದಾದಿ ಕೇಶವ ಭಕ್ತಿಗೊಲಿದವನೇ ।।೫।।
Lyrics in English
Govinda hari govinda keshava krishna janaardhana ||pa||
Matsyaavataaradolaadidane mandaraachala bennolu taalidane acchaasukaaranaagi baalidane madahejje hiranyana seelidane||1||
Kumbini daanava bedidane | kshaatrarembuvanu hata maadidane| ambudige shara hoodidane| kamalaambaka gollarolaadidane||2||
Vasudevanudaradi puttidane polmeseva dhanujarodaguttidane esava kaalingana mettidane | bhadisuvara yamapura kattidane||3||
Pootaniya maiya sokidane | maha ghataka moleyundu tegidane | ghaatakiyanatta nookidane | gopavrata gogalanella sakidane ||4||
Sadhisi tripurara geludavane | lechara bhedisi hayaveri meredavane| sadhisi sakalava tilidavane| baadadaadi keshava bhaktigolidavane||5||