
ಜಪವ ಮಾಡಿದರೇನು ತಪವ ಮಾಡಿದರೇನು ವಿಪರೀತ ಕಪಟಗುಣ ಕಲುಷವಿದ್ದವರು ||pa||
ಆದಿಗುರುವರಿಯದೆ ಅತ್ತಲಿತ್ತಲು ತೊಳಲಿ ವೇದಶಾಸ್ತ್ರವನೋದಿ ಬಾಯಾರಲು|
ಹಾದಿಯನು ಕಾಣದಂತಿರುತಿರ್ದು ಹಲವೆಂಟು ವಾದ ತರ್ಕದೊಳಿದ್ದ ಭೇದವಾದಿಗಳು ||1||
ನುಡಿ ನಡೆವ ಕಾಲದಲಿ ದಾನ ಮಾಡದೆ ಇರಲು ಅಡವಿಯೊಳು ಕೆರೆ ತುಂಬಿ ಬತ್ತಿದಂತೆ |
ಮಡದಿ ಮಕ್ಕಳಿಗೆಂದು ಒಡವೆ ವಸ್ತ್ರವ ಗಳಿಸೆ ಹಿಡಿಯಲಾ ಯಮನವರ ಕಟ್ಟಿಗೊಳಗಾಗಿ ||2||
ಚಳಿಮಳೆಯ ಅತಿ ಕಾರುಗತ್ತಲೆಯೊಳಗೆ ಎದ್ದು ಹೊಳೆಯೊಳಗೆ ಮುಳುಗಿ ಜಪ ತಪವ ಮಾಡಿ
ಕಳವಳಿಸಿ ನೂರೆಂಟು ಹಲುಬಿ ಬಳಲಲು ಬೇಡ ನಳಿನಾಕ್ಷ ಆದಿಕೇಶವನ ನೆನೆ ಮನವೆ ||3||
Lyrics in English
Japava madidarenu tapava madidarenu viparita kapataguna kalusaviddavaru||p||
Adi guruvariyade attalittalu tolali veda shastrava nodi bayaralu
Hadiyenu kanadantirdu halaventu vada tarkadolidda bhedavadigalu||1||
Nudi nadeva kaaladali daana madade iralu adaviyolu keretumbi battidante
Madadi makkaligendu odave vastravagalise hidiyala yamanavara kattigolagagi||2||
Chali maleyu ati karugattaleyolage eddu holeyolage mulugi japa tapava madi
Kalavalisi nurentu halubi balalalu beda nalinaksa Adi keshavana nene manave||3||