ಜಯ ತುಳಸಿ ಹೇ ತುಳಸಿ /Jaya tulasi he tulasi

ಜಯ ತುಳಸಿ ಹೇ ತುಳಸಿ ನಿನಗೆ ವಂದನೆ | ಜಲಜನಾಭನ ಅರಸಿ ನಿನಗೆ ವಂದನೆ ||

ನಿರ್ಮಲ ಮನದಲ್ಲೂ ನಿಶ್ಚಲ ಭಕ್ತಿಯಲು | ಮಾಧವನ ಪ್ರೀತಿಯನು ಗಳಿಸಿದೆ ಅಂದು | ಶ್ರೀಕೃಷ್ಣ ತುಳಸಿ ಎಂಬ ಹೆಸರನು ಪಡೆದು | ಹರಿಯೊಳಗೆ ಒಂದಾದೆ ಸೌಭಾಗ್ಯ ಪಡೆದು ||

ಪ್ರತಿ ಮನೆಯ ಅಂಗಳವು ಆಲಯ ನಿನಗೆ | ಪ್ರತಿ ಗೃಹದ ಸುಮಂಗಳೆಯು ಭಕ್ತಳು ನಿನಗೆ | ಅರಶಿನ ಕುಂಕುಮದ ಸೌಭಾಗ್ಯವ ತಾರೆ |ಆರೋಗ್ಯದ ಕಲ್ಪತರು ನೀನಾಗಿ ಬಾರೆ ||

ಉತ್ಥಾನ ದ್ವಾದಶಿಯ ಪುಣ್ಯದ ದಿನವೇ | ಚಂದನ ಧೂಪಾದಿಗಳ ನೀಡುವೆ ನಿನಗೆ | ನೀ ನಗುವ ಮನೆಯೊಳಗೆ ಹಾಲಿನ ಹೊಳೆಯು | ನೀ ಒಲಿಯೇ ಮನ ನಲಿಯೇ ಸುಖದ ಕಡಲು ||

Lyrics in English

Jaya tulasi he tulasi ninage vandane jalajanabhana arasi ninage vandane ||

Nirmala manadallu nishchala bhajtiyalu | madhavana preetiyanu galiside andu | srikrishna tulasi emba hesaranu padedu | hariyolage ondade soubhagya padedu||

Prati maneya angalavu alaya ninage prati grahada sumangaleyu bhaktalu ninage | arashina kumkumada soubhagyava taare | arogyada kalpataru neenagi baare ||

Uthaana dwadashiya punyada dinave chandana dhupadigala needuve nunage | ni naguva maneyolage halina holeyu | ni oliye mana naliye sukhada kadalu ||


The last song in the album. Song sung by B.K.Sumitra

Leave a Reply