
ತೂಗುವೆ ರಂಗನ ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೇ ||ಪ||
ಮೇಲುಕೋಟೆ ಸ್ವಾಮಿ ಚೆಲುವ ರಾಯನ
ಬೇಲೂರ ಶ್ರೀಚೆನ್ನ ಕೇಶವನಾ |
ಉಡುಪಿಯಲಿ ವಾಸಿಸುವ ಶ್ರೀಕೃಷ್ಣನ
ಶ್ರೀರಂಗಪಟ್ಟಣದಿ ಮಲಗಿದವನ ||ತೂಗುವೆ||
ಕಣ್ಣಲೇ ಹುಣ್ಣಿಮೆ ತಂದವನ
ನಗುವಲ್ಲೇ ಮಲ್ಲಿಗೆ ಚೆಲ್ಲುವನ |
ಚೆಲುವಲ್ಲೇ ತಾವರೆಯ ನಾಚಿಸುವನ
ಈ ಮನೆಗೆ ಬೆಳಕಾಗಿ ಬಂದವನ ||ತೂಗುವೆ ||
ಆಲದೆಲೆಯ ಮೇಲೆ ಮಲಗಿದವನಾ
ಭಕ್ತರ ಪಾಲಿಗೆ ಪರಮಾತ್ಮನ
ಮತ್ತೆ ನಮಗಾಗಿ ಇಳೆಗೆ ಬಂದವನ
ಜಗವನ್ನೇ ತೋರುವ ಜಗದೀಶನ ||ತೂಗುವೆ||
Lyrics in English
Tooguve rangana tooguve krishnana|toogi jo jo haaduve||pa||
Melukote swami cheluvarayana belura srichenna keshavana| udupiyali vasisuva sri krishnana srirangapattanadi malagidavana ||tooguve||
Kannale hunnime tandavana naguvalle mallige chelluvana| cheluvalle taavareya naachisuvana e manege belakaagi bandavana||tooguve||
Aaladeleya mele malagidavana bhaktara paalige paramaatmana| matte namagagi elege bandavana jagavanne toruva jagadishana||tooguve||