ಬೇವು ಬೆಲ್ಲದೊಳಿಡಲೇನು ಫಲ /Bevu belladolidalenu

ಬೇವು ಬೆಲ್ಲದೊಳಿಡಲೇನು  ಫಲಾ
ಹಾವಿಗೆ ಹಾಲೆರದರೇನು  ಫಲಾ ||

ಕುಟಿಲವ  ಬಿಡದಿಹ  ಕುಜನರು  ಮಂತ್ರವ ,
ಪಠನೆಯ ಮಾಡಿದರೇನು ಫಲ|
ಸಟೆಯನ್ನಾಡುವ  ಮನುಜರ ಮನದಲಿ,
ವಿಠಲನ ನೆನೆದರೆ ಏನು ಫಲಾ ||

ಕಪಟತನದಿ ವಂಚಿಸುವ ಮನುಜರು ,
ಜಪಗಳ ಮಾಡಿದರೆ ಏನು ಫಲಾ |
ಕುಪಿತ ಬುದ್ಧಿಯನು ತ್ಯಜಿಸದೆ  ನಿತ್ಯದಿ ,
ಉಪವಾಸ ಇದ್ದರೆ  ಇನ್ನೇನು ಫಲಾ ||

ಮಾತಾ – ಪಿತರನು ಬಳಲಿಸುವಾ  ಮಗ ,
ಯಾತ್ರೆಯ ಮಾಡಿದರೇನು ಫಲಾ |
ಘಾತಕ ತನವನು  ಬಿಡದೆ ನಿರಂತರ ,
ಗೀತೆಯನೋದಿದರೇನು  ಫಲಾ ||

ಪತಿಯನು ನಿಂದಿಸಿ  ಬೊಗಳುವ ಸತಿಯರು  ,
ವ್ರತಗಳ ಮಾಡಿದರೇನು ಫಲ |
ಅತಿಥಿಗಳ ಎಡೆಯಲಿ  ಭೇದವ ಮಾಡುತ ,
ಗತಿಯನು ಬಯಸಿದರೆ ಏನು ಫಲಾ ||

ಹೀನ ಕೃತ್ಯಗಳ  ಮಾಡುತ ನದಿಯಲಿ ,
ಸ್ನಾನವ  ಮಾಡಿದರೇನು ಫಲಾ |
ಶ್ರೀನಿಧಿ ಪುರಂದರ ವಿಠಲನ ನೆನೆಯದೆ ,
ಮೌನವ ಮಾಡಿದರೇನು ಫಲಾ  ||

Lyrics in English

Bevu belladolidalenu phala havige haleredenu phala ||

Kutilava bidadiha kujanaru mantrava pataneya madidarenu phala |
Sateyannaaduva manujara manadali vittalana nenedare enu phala ||

Kapatatanadi vanchisuva manujaru japagala maadidare enu phala |kupita buddhiyanu tyajisade nityadi upavasaviddarenu phala||

Mata pitaranu balalisuva maga yatreya madidarenu phala |
ghatakatanavanu bidade nirantara geeteyanodidarenu phala ||

Patiyanu nindisi bogaluva satiyaru vratagala madidarenu phala |
atithigaledeyali bhedava maduta gatiyanu bayasidarenu phala ||

Hina krutyangala maduta nadiyali snanava madidarenu phala |
shrinidhi purandara vittalana neneyade maunava madidarenu phala ||


https://youtu.be/TmAcyZnuo54

Leave a Reply