
ಮನಸು ಕರಗದೆ ಸ್ವಾಮಿ ದಯವು ಬಾರದೆ ।ಪ।
ದೀನನಾಗಿ ನಿನ್ನ ಪಾದ ನಂಬಿದೆನೋ ಕೃಪಾಸಿಂಧು ।ಅ . ಪ ।।
ಒಡಲಿಗೋಸುಗವಾಗಿ ಪರರ ಅಡಿಗಳಿಗೆ ನಮಿಸಿ ಅವರ |
ಬಿರು ನುಡಿಗಳ ಕೇಳಲಾರೆ ಬೇಡಲಾರೆ ಹೇ ಮುರಾರೇ ।।೧।।
ಜನನಿ ಜನಕ ನೀನು ಎಂದು ನಿನ್ನ ನಂಬಿದೆ ದೀನಬಂಧು |
ಎನ್ನ ಪಾಲಿಸೋ ಈಗ ಬಂದು ಮನ್ನಿಸಯ್ಯ ಕೃಪಾಸಿಂಧು ।।೨।।
ದಿನವು ಕಳೆದು ಹೋಯಿತಲ್ಲ ಪ್ರಾಣೇಶ ವಿಠಲ
ಮನ್ನಿಸುವರು ಒಬ್ಬರಿಲ್ಲ ಕಾಯೋ ಬಾಲಗೋಪಾಲ ।।೩।।
Lyrics in English
Manasu karagade swami dayavu barade |pa|
dinanagi ninna pada nambideno krupasindhu |a.pa|
Odaligosugavagi parara adigalige namisi avara |
biru nudigala kelalare bedalare he murare ||1||
Janani janaka ninu endu ninna nambide dInabandhu |
enna paliso iga bandu mannisayya krupasindhu ||2||
Dinavu kaledu hoyitalla pranesha vithala |
mannisuvaru obbarilla kayo balagopala ||3||