
ಪರತತ್ವವನು ಬಲ್ಲ ಪಂಡಿತನು ನಾನಲ್ಲ
ಹರಿನಾಮವೊಂದುಳಿದು
ನನಗೇನುತಿಳಿದಿಲ್ಲ ,ನನಗೇನು ತಿಳಿದಿಲ್ಲ
ಮಾನವ…ದೇಹವು ,ಮೂಳೆ ಮಾಂಸದ ತಡಿಕೆ
ಮಾನವ ಮೂಳೆ ಮಾಂಸದ ತಡಿಕೆ
ಇದರ ಮೇಲಿದೆ ತೊಗಲಿನ ಹೊದಿಕೆ
ತುಂಬಿದೆ ಒಳಗೆ ಕಾಮಾದಿ ಬಯಕೆ
||ಮಾನವ||
ನವ ಮಾಸಗಳೂ ಹೊಲಸಲಿ ಕಳೆದು ಆ……
ನವ ರಂಧ್ರಗಳಾ ಕಳೆದು ಬೆಳೆದು
ಬಂದಿದೆ ಭುವಿಗೆ ಈ ನರ ಗೊಂಬೆ
ನಂಬಲು ಏನಿದೆ ಸೌಭಾಗ್ಯವೆಂದೇ
ಮಾನವಾ ಮೂಳೆ ಮಾಂಸದ ತಡಿಕೆ
ದೇಹವು ಮೂಳೆ ಮಾಂಸದ ತಡಿಕೆ
ಉಸಿರಾಡುವ ತನಕ ನಾನು
ನನದೆಂಬ ಮಮಕಾರ
ನಿಂತ ಮರು ಘಳಿಗೆ ಮಸಣದೆ ಸಂಸ್ಕಾರ
ಮಣ್ಣಲಿ ಬೆರೆತು ಮೆಲ್ಲಗೆ ಕೊಳೆತು
ಮುಗಿಯುವ ದೇಹಕೆ ವ್ಯಾಮೋಹವೇಕೆ
ಮಾನವಾ ಮೂಳೆ ಮಾಂಸದ ತಡಿಕೆ
ದೇಹವು ಮೂಳೆ ಮಾಂಸದ ತಡಿಕೆ
ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಬರೀ ಕತ್ತಲೆ
ಭಕ್ತಿಯ ಬೆಳಕು ಬಾಳಿಗೆ ಬೇಕು
ಮುಕ್ತಿಗೆ ವಿಠಲನ ಕೊಂಡಾಡಬೇಕು
||ಮಾನವ||
ವಿಠ್ಠಲಾ….ವಿಠ್ಠಲ…ಪಾಂಡುರಂಗ ವಿಠ್ಠಲ||6||
Lyrics in English
Paratatvavanu balla panditanu naanalla | harinaamavondulidu nanagenu tilidilla ||
Maanava … dehavu, moole maamsada tadike | maanava moole maamsada tadike edara melide togalina hodike, tumbide olage kaamaadi bayake ||maanava||
Nava maasagalu holasali kaledu, nava randhragala kaledu beledu, bandide bhuvige e nara gombe, nambalu enide soubhagyavende ||maanava||
Usiraaduva tanaka naanu, nanademba mamakaara | ninta maru ghalige masanade samskaara | mannali beretu mellage koletu, mugiyuva dehake vyaamohaveke ||maanava||
Baruvaaga bettale hoguvaaga bettale | bandu hoguva naduve baree kattale | bhaktiya belaku baalige beku muktige vithalana kondaadabeku ||maanava||
vithalaa … vithala … panduranga vithala