
ರಂಗ ಒಲಿದ ದಾಸರಾಯ
ರಂಗ ಒಲಿದ ದಾಸರಾಯ
ಸಾಧು ಸಂಘವಿಡಿಸಿ
ಕರುಣದಿ ಪಿಡಿಕೈಯ್ಯ ||ಪ||
ದಾಸರಾಯಾ ದಾಸರಾಯಾ ದಾಸರಾಯ
ಕುಂಭಿಣಿ ಸುರನಾದ ನಂಬಿದೆ ನಿನ್ನ ಪಾದ
ಬೆಂಬಿಡದೆಲೆ ಕಾಯೊ
ಸ್ತಂಭ ಮಂದಿರ ಕಂಬು ಕಂದರ
ಭಕ್ತ ಮಂದಾರ ಭಕ್ತ ಮಂದಾರ ||೧||
ದಾಸರಾಯಾ ದಾಸರಾಯಾ ದಾಸರಾಯ
ಹರಿಕಥೆ ಸುಧೆ ಸಾರ
ಸುರಸ ಗ್ರಂಥವ ಜಗದಿ
ವಿರಚಿಸಿರುವ ನಿನ್ನ
ವರ ಉಪಕಾರ ವರ್ಣಿಸಲಪಾರ
ಪರಮೋದ್ಧಾರ ಪರಮೋದ್ಧಾರ ||೨||
ದಾಸರಾಯಾ ದಾಸರಾಯಾ ದಾಸರಾಯ ||
ಸಾಮಗಾನ ವಿಲೋಲಾ
ಶ್ಯಾಮಸುಂದರವಿಠಲನ ಸ್ವಾಮಿಯ ಭಕುತ ||
ನಿಸ್ಸೀಮ ಪ್ರಹ್ಲಾದ ಅನುಜ ಸಹ್ಲಾದ
ನೀಡೆಮಗಹ್ಲಾದ ನೀಡೆಮಗಹ್ಲಾದ ||೩||
ದಾಸರಾಯಾ ದಾಸರಾಯಾ ದಾಸರಾಯ ||
Lyrics in English
Ranga olida dasaraya, ranga olida dasaraya sadhu sanghavidisi karunadi pidikaiyya ||pa||
dasaraya dasaraya dasaraya ……
Kumbhini suranada nambide ninna pada | bembidadale kaayo | stambha mandira kambu kandara | bhakta mandara ||1|| dasaraya dasaraya dasaraya …….
Harikathe sudhe sara. surasa granthava jagadi, virachisiruva ninna | vara upakara varnisalapara, paramoddhaara ||2|| dasaraya dasaraya dasaraya ……
samagana vilola, shyamasundara vittalana swamiya bhakuta | nisseema prahlada anuja sahlada, needemagahlada ||3|| dasaraya dasaraya dasaraya ……
****************