ಶಿವ ಶಿವ ಶಿವ ಎನ್ನಿರೊ /Shiva shiva shiva enniro

ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲ ಶಿವ ಶಿವ ಶಿವ ಎನ್ನಿರೊ ||ಪ||

ಆಗಮ ಸಿದ್ಧಾಂತ ಮೂಲದ ಜಪವಿದು ಶಿವ ಶಿವ ಶಿವ – ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವ ಶಿವ ಶಿವ ||1||

ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವ ಶಿವ ಶಿವ – ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ||2

ಅಪರಾಧ ಕೋಟಿ ತ್ಯಜಿಸಬೇಕಾದರೆ ಶಿವ ಶಿವ ಶಿವ – ಮುಂದೆ ಉಪಮಿತರೋರ್ಮಿತರರಿಯದ ಜಪವಿದು ಶಿವ ಶಿವ ಶಿವ ||3||

ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ – ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ||4||

ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ – ನೀವು ಭವನ ಪದವಿಯನು ಪಡೆಯಬೇಕಾದರೆ ಶಿವಶಿವಶಿವ ||5||

ಗುರುಲಿಂಗ ಜಂಗಮವ ಅರಿಯಬೇಕಾದರೆ ಶಿವಶಿವಶಿವ – ಮುಂದೆ ಪರಮಾತ್ಮನ ನೀವು ತಿಳಿಯಬೇಕಾದರೆ ಶಿವಶಿವಶಿವ ||6||

ಪೃಥ್ವಿಗೆ ಸದ್ಗುರು ಆಗಬೇಕಾದರೆ ಶಿವಶಿವಶಿವ – ನೀವು ತತ್ತ್ವಪತಿ ಆದಿಕೇಶವನ ಕೂಡಬೇಕಾದರೆ ಶಿವಶಿವಶಿವ ||7||

Lyrics in English

Shiva shiva shiva enniro – moojagadavarella shiva shiva shiva enniro ||

Agama siddhanta moolada japavidu shiva shiva shiva – nimma rogada moolava kedipa oushadhavidu shiva shiva shiva ||1||

Manuja janmadi hutti mai mareyabedi shiva shiva shiva – nimma tanumana pranava vyartava maadade shiva shiva shiva ||

Aparadha koti tyajisabekadare shiva shiva shiva – munde upamitarormitarariyada japavidushiva shiva shiva ||

Javana badheya neevu jayisabekaadare shiva shiva shiva – nijasavimala muktiya padeyabekaadare shiva shiva shiva ||

Bhuvanake ballidaragabekadare shiva shiva shiva – neevu bhavana padaviyanu padeyabekadare shiva shiva shiva ||

Gurulinga jangamava ariyabekadare shiva shiva shiva – munde paramatmana neevu tiliyabekadare shiva shiva shiva ||

Prutvige sadguru agabekadare shiva shiva shiva – neevu tatvapati adikeshavana koodabekadare shiva shiva shiva ||


Leave a Reply