ಶೃಂಗ ಗಿರಿ ಮೇಲಿಂದ ಬೀಸಿ / Shrunga giriya melinda

ಶೃಂಗಾಗಿರಿಯ ಮೇಲಿಂದ ಬೀಸಿ ಬಂದ ತಂಗಾಳಿ | ಕೋರುತಿದೆ ನಿನಗೆ ಮಂಗಳ ತುಂಗಾನದಿ ಅಲೆಗಳು ಕಲಕಲ ನಾದದಲಿ | ಹಾಡುತಿದೆ ನಿನಗೆ ಜೋಗುಳ ||ಶೃಂಗಗಿರಿಯ||

ಮಾಣಿಕ್ಯ ವೀಣೆಯಿದು ಏಕಾಂತ ಸೇವೆಗೆ | ಮಿಡಿಯುತಿದೆ ಮಂಜುಳ ನಾದ | ಬಂಗಾರದುಯ್ಯಾಲೆ ತೂಗಿರಲು ಹಾಯಾಗಿ | ಮೃದುವಾಗಿ ಕೇಳುತಿದೆ ಮಂತ್ರವೇದ ||1||

ಬೇಡಿ ಬಂದವರ ಬೇಡಿಕೆಯ ಪೂರೈಸಿ ಆಯಾಸ ಎನಿತಾಯಿತೋ ಜ್ಞಾನ ಗಂಗೆಯ ಸತತ ಹರಿಸುವ ಶಾರದೆಗೆ ಆರಾಮ ಮರೆತಾಯಿತೋ ||2||

ಮಕ್ಕಳೆಮ್ಮಯ ಸೇವೆ ಒಲವಿಂದ ಸ್ವೀಕರಿಸು ಮೈ ಮರೆತು ಹಾಯಾಗಿ ಪವಡಿಸು, ಬಂಗಾರ ಕಿರಣಗಳು ಭುವಿತೊಯ್ದ ವೇಳೆ ಮನಸಾರ ನೀನಮ್ಮ ಹರಸಲು||3||

Lyrics in English


Shrunga giriya melinda beesi banda tangaali korutide ninage mangala | tungaanadi alegalu kalakala naadadali | haadutide ninage jogula ||shrunga giriya||

Maanikya veeneyidu ekaanta sevege| midiyutide manjulanaada |bangaaraduyyaale toogiralu haayaagi mruduvaagi kelutide mantraveda||1||

Bedi bandavara bedikeya pooraisi ayaasa enitaayito jnaana gangeya satata harisuva sharadege aarama maretaayito||2||

Makkalemmaya seve olavinda sweekarisu mai maretu haayaagi pavadisu | bangaara kiranagalu bhuvitoyda vele manasaara neenamma harasalu ||3||


Leave a Reply