
ಶ್ರೀದೇವಿ ನೀನಮ್ಮ ಮೂಕಾಂಬಿಕೆ | ನೂರಾರು ನಮಸ್ಕಾರ ಸಿರಿ ಪಾದಕೆ |ಶರಣೆಂದ ಭಕ್ತರಿಗೆ ನೀ ಕಲ್ಪವಲ್ಲಿ | ನಿನಗಾರು ಸರಿಸಾಟಿ ಭೂಲೋಕದಲ್ಲಿ||ಪ||
ಜಯದೇವಿ ಜಯಜನನಿ ಜನನಾಯಕಿ |ಜಯ ವಿಜಯ ನೀ ನೀಡು ಜಗದ್ರಕ್ಷಕಿ | ಕೊಡಚಾದ್ರಿಯಿಂದಿಳಿದ ಕರುಣಾಮಯಿ | ಕೊಲ್ಲೂರಿನಲ್ಲಿ ಇರುವ ಮಮತಾಮಯಿ ||೧||
ಚಾಮುಂಡಿ ನೀನೇ ಮಹಾಲಕ್ಷ್ಮಿ ನೀನೇ | ಶೃಂಗೇರಿಯಲ್ಲಿರುವ ಶಾರದೆಯು ನೀನೇ | ಶ್ರೀ ಶಂಕರಾಚಾರ್ಯರ ಆರಾಧ್ಯ ದೇವಿ | ಶ್ರೀ ಶಕ್ತಿ ನೀನೇ ಹೇ ದೇವಿ ಮಹಾದೇವಿ ||೨||
ಆನಂದ ಸುಧೆಯಲ್ಲಿ ಮೀಸುತ ಜಗವ | ನೀ ತರುವೆ ಅಂಬೆ ಪರ ಪರಿವಿಭವ | ಮಣಿದ್ವೀಪದಲ್ಲಿರುವ ಮಹಾದೇವಿ ಶರಣು | ಮನದ ಮಂದಾರದ ಮಹಾದೇವಿ ಶರಣು ||೩||
Lyrics in English
Sridevi neenamma mookambike | nooraaru namaskara siri paadake| sharanenda bhaktarige nee kalpavalli ninagaaru sarisati bhulikadalli||pa||
Jayadevi jayajanani jananayaki| jaya vijaya nee needu jagadrakshaki |kodachadriyindilida karunamayi |kolloorinalliruva mamataamayi||
Chamundi neene mahalakshmi neene| shrungeriyalliruva sharadeyu neene| sri shankaraacharyara aradhya devi |sri shakti neene he devi mahadevi||
Ananda sudheyalli meesuta jagava| nee taruve ambe para parivibhava| manidweepadalliruva mahadevi sharanu| manada mandaarada mahadevi sharanu||
Second song in the album