
ಶ್ರೀನಿವಾಸ ನೀನೇ ಪಾಲಿಸೋ ಶ್ರಿತಜನ ಪಾಲ
ಗಾನಲೋಲ ಶ್ರೀ ಮುಕುಂದನೇ || ಪ ||
ಧ್ಯಾನಮಾಳ್ಪ ಸಜ್ಜನರ ಮಾನದಿಂ ಪರಿಪಾಲಿಪ
ವೇಣುಗೋಪಾಲಾ ಮುಕುಂದ ವೇದವೇದ್ಯ ನಿತ್ಯಾನಂದ ||ಅಪ||
ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭಯವೋ ಮಾಧವ
ಅಂಧಕಾರಣ್ಯದಲ್ಲಿ ನಿಂದು ತತ್ತರಿಸುತಿಹೆನೊ
ಬಂದು ಬಂದು ಈ ಭವದಿ ಬೆಂದು ನೊಂದೇನೊ ಮುಕುಂದ||೧||
ಎಷ್ಟು ದಿನ ಕಷ್ಟ ಪಡುವುದೊಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ ಮುಟ್ಟಿ ನಿನ್ನ ಭಜಿಸಲಾರೆ
ಕೆಟ್ಟ ನರಜನ್ಮದೊಳ ದುಷ್ಟ ಕಾರ್ಯ
ಮಾಡಿದಾಗ್ಯು ಇಷ್ಟನಾಗಿ ಕೈಯಪಿಡಿದು ||೨||
ಅನಿದಿನ ಅನೇಕ ರೋಗಂಗಳಾ ಅನುಭವಿಸುವೆನು
ಘನ ಮಹಿಮ ನೀನೆ ಬಲ್ಲೆಯಾ
ತನುವಿನಲ್ಲಿ ಬಲವಿಲ್ಲ ನೆನೆದ ಮಾತ್ರ ಸಲಹುವ
ಹನುಮದೀಶ ಪುರನ್ದರ ವಿಠಲನೇ ಬೇಗ ಬಲಿದು ||೩||
Lyrics in English
Composer : Sri Purandara dasaru
Shrinivasa neene paliso shritajana pala
ganalola shri mukundane || pa ||
dhyanamalpa sajjanara manadim paripalipa
venugopala mukunda vedavedya nityananda ||apa||
endige ninna padabjava ponduva sukha
endige labhayavo madhava
andhakaranyadalli nindu tattarisutiheno
bandu bandu ee bhavadi bendu nondeno mukunda||1||
eshtu dina kashta paduvudo
yashode kanda drushtiyinda nodalagade
mutti ninna bhajisalare ketta narajanmadolu
dushTa karya madidagyu ishtanagi kaiyapididu ||2||
anidina aneka rogangala anubhavisuvenu
ghana mahima nine balleya
tanuvinalli balavilla neneda matra salahuva
hanumadisha purandara vithalane bega balidu ||3||