
ಸಂಬಳಕಿಟ್ಟುಕೊಳ್ಳೋ ಕೃಷ್ಣ ಕ್ರಪಾಳು ಸಂಬಳಕಿಟ್ಟುಕೊಳ್ಳೋ | ಸಂಬಳಕಿಟ್ಟುಕೋ ನಿನ್ನಂಬಳದಲ್ಲಿರ ಬೇಕೆಂಬೋದೆ ಎನ್ನಲ್ಲಿ ತುಂಬಿ ತುಳುಕುತಿದೆ || ಸಂಬಳಕಿಟ್ಟುಕೊಳ್ಳೋ||
ಅರೆಕವಡಿ ಒಳ್ಳೆ ಸಂಬಳ ನಿನ್ಹೆಸರೇಳಿ ಮಾಡುವೆ ನಾ ಗೋಪಾಲ | ಪರಟಿ ತಂಬೂರಿ ಪಿಡಿದು ತಿರಿತಿಂದು ಕೊಂಡು ಎನ್ನಿ |ಕರೆದಾ ಕ್ಷಣದಿ ಸಿಧ್ಧಇರುವೆ ಎನ್ನೀಕ್ಷಣ ||ಸಂಬಳಕಿಟ್ಟುಕೊಳ್ಳೋ||
ಮಧ್ವರಾಯರ ಮನೆಯೊಳು ಅನುಗಾಲ ನಾನಿದ್ದೆ ,ಕೇಳಿಕೋ ಗುಣಗಳೂ |
ಪ್ರದ್ಯುಮ್ನ ಇವು ನಿನ್ನ ಬುಧ್ಧಿಗೆ ಬಂದರೆ ಇದ್ದಾರೆ ಇರದಿವನೆಂಬೋ ಇದ್ದರೆ ಈ ಕ್ಷಣ
||ಸಂಬಳಕಿಟ್ಟುಕೊಳ್ಳೋ||
ಬಲು ಮಂದಿಯನು ನೋಡಿದೆ ನಿನ್ನಂತವರನೆಲ್ಲು ನಾ ನೋಡಿಲ್ಲ ಬರಿದೆ |
ಲೋಲ ಶ್ರೀ ವೇಣು ಗೋಪಾಲವಿಠ್ಠಲ ನಿನ್ನ ಕೂಲಿ ಬಂದಾಗ್ಯು | ರಾಜ್ಯವಾಳಿದ ಪರಿಯೆಂಬೆ |
||ಸಂಬಳಕಿಟ್ಟುಕೊಳ್ಳೋ||
Lyrics in English
Sambalakittukollo krishna krupaalu | sambalakittuko ninambaladallira bekembode ennali tumbi tulukutide ||sambalakittukollo||
Arekavadi olle sambala ninhesareli maaduve naa gopaala | parati tamboori pididu tiritindi tindu kondu enni | karedaa kshanadi sidda eruve enneekshana ||sambalakittukollo||
Madhwaraayara maneyolu anugaala naanidde, keliko gunagalu | pradyumna evu ninna buddhige bandare eddaare eradivanembo eddare ee kshana || sambalakittukollo||
Balu mandiyanu nodide ninnantavaranella naa nodilla baride | lola sri venugopaala vittala ninna kooli bandaagyu | raajyavaalida pariyembe || sambalakittukollo||