
ಸತತ ಮಾರ್ಗದಿ ಸಂತತ ಸೇವಿಪರಿಗೆ । ಅತಿ
ಹಿತದಲಿ ಮನೋರಥವ ಕೊಡುವೆನೆಂದು ।।ಪ ।।
ರಥವಾನೇರಿದ ರಾಘವೇಂದ್ರ । ಸದ್ಗುಣಗಳ ಸಾಂದ್ರ ।।ಅ.ಪ ।।
ಚತುರ ದಿಕ್ಕು ವಿದಿಕ್ಕುಗಳಲ್ಲಿ । ಹರಿವೋ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ । ವರವಾ ಬೇಡುತಲಿ |ನುತಿಸುತ ಪರಿಪರಿ ನತರಾಗಿ ಹರಿಗೆ
ಗತಿ ಪೇಳದೆ ಸರ್ವಥಾ ನಾ ಬಿಡೆನೆಂದು ।।೧।।
ಅತುಳ ಮಹಿಮಾನಾ ದಿನದಲ್ಲಿ ।ದಿತಿಜಾ ವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ । ಉತ್ತಮ ರೀತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗಳು
ಮನ್ಮಥ ಪಿತನೊಲಿಸಿದ ಜಿತ ಕರುಣದಲಿ ।।೨।।
ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ । ಯತಿರಾಘವೇಂದ್ರ …. ಗುರುರಾಘವೇಂದ್ರ
ಪತೀತರೋದ್ಧಾರಿಯೇ ಪಾವನಕಾರಿಯೇ ।ಕರಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ……. ವಿಠಲ …. ಗೋಪಾಲವಿಠಲ
ಪ್ರತಿ ಮಂತ್ರಾಲಯದೊಳು ಅತಿ ಮೆರೆವ ।।೩।।
Lyrics in English
Satata margadi santata seviparige |ati hitadali manoratava koduvenendu||pa||
Rathavanerida raghavendra| sadgunagala sandra||a.pa||
Chatura dikku vidikkugallai| charipajanaralli mitiyillade bandu olaisutali | varava bedutali | nutisuta paripari nataragi harige gati pelade sarvatha na bidanendu ||1||
Atula mahimana dinadalli |ditija vamshadali |utpattiyagi uchitadalli | uttama reetiyalli atishayavirutire pitana baadhegalu manmata pitanolisida jita karunadali ||2||
Pratama prahlada vyasamuniye | yatiraghavendra …. Gururaghavendra patitarodhariye pavanakariye | karamugivenu doreye kshitiyolu gopalavittalana smarisuta … Vittala gopalavittala prati mantralayadolu ati mereva ||3||