
ಹುಟ್ಟಿದೇಳು ದಿವಸದಲಿ
ದುಷ್ಟ ಪೂತನಿಯ ಕೊಂದೆ||ಹುಟ್ಟಿ||
ಮುಷ್ಠಿ ವಿಷದ ಮೊಲೆಯುಂಡ ಕಾರಣ||2||
ದೃಷ್ಟಿ ತಾಗಿತೇ ರಂಗಯ್ಯ ನಿನಗೆ ರಂಗಯ್ಯ
ದ್ರಷ್ಠಿ ತಾಗಿತೇ ರಂಗಯ್ಯಾ
ಅಳುವುದ್ಯಾತಕೋ ರಂಗ
ಅತ್ತ ರಂಜಿಪ ಗುಮ್ಮಾ
||ಅಳುವುದ್ಯಾತಕೋ||
ಬಾಲಕತನದಿ ಗೋಪಾಲಕರೊಡಗೂಡಿ||2||
ಕಾಳಿಂದಿ ಮಡುವನು ಕಲಕಿದ ಕಾರಣ
ಕಾಲು ಉಳುಕಿತೆ ರಂಗಯ್ಯ ನಿನಗೆ ರಂಗಯ್ಯ
ಕಾಲು ಉಳುಕಿತೆ ರಂಗಯ್ಯಾ
ಅಳುವುದ್ಯಾತಕೋ ರಂಗ
ಅತ್ತ ರಂಜಿಪ ಗುಮ್ಮಾ
||ಅಳುವುದ್ಯಾತಕೋ||
ವಸುದೇವ ಸುತನಾಗಿ
ಅಸುರರೆಲ್ಲರ ಮಡುಹಿ||ವಸುದೇವ||
ಹೆಸರಿನ ಮಲ್ಲರ ಮಡುಹಿದ ಕಾರಣ||2||
ಕಿಸರು ತಾಕಿತೆ ರಂಗಯ್ಯ ನಿನಗೆ ರಂಗಯ್ಯ
ಕಿಸರು ತಾಕಿತೆ ರಂಗಯ್ಯಾ
ಅಳುವುದ್ಯಾತಕೋ ರಂಗ
ಅತ್ತ ರಂಜಿಪ ಗುಮ್ಮ
||ಅಳುವುದ್ಯಾತಕೋ||
ಶರಣು ವೇಲಾಪುರದ
ಚೆಲುವ ಚೆನ್ನಿಗರಾಯ||ಶರಣು||
ಪರಿಪರಿ ವಿಧದಿಂದ
ಶರಣರ ಪೊರೆಯುವ||ಪರಿಪರಿ||
ವರದಪುರಂದರ ವಿಠ್ಠಲ ರಾಯ ವಿಠ್ಠಲ
ವರದಪುರಂದರ ವಿಠ್ಠಲ
ಅಳುವುದ್ಯಾತಕೋ ರಂಗ
ಅತ್ತ ರಂಜಿಪ ಗುಮ್ಮ. ||ಅಳುವುದ್ಯಾತಕೋ||
||ಹುಟ್ಟಿದೇಳು||
Lyrics in English
Aluvudyatako ranga atta ranjipa gumma |pa|
huttidelu divasadali dushta pootaniya konde ||
Mushti vishada moleyunda kaarana
drushti taagite ninage rangayya ||
(aluvudyatako)
Baalakatanadali gopalakarodanaadi
kaaliya maduvanu kalakida kaarana
kaalunondite ninage rangayya ||
(aluvudyatakO)
Vasudeva sutanaagi asuramallara kondu
kasuvina kamsana konda kaarana
kisaru kaadite ninage rangayya ||
(aluvudyatako)
Sharanuvelapurada doreye chennigaraya
sharanara salahuva karunanidhiye
varadapurandara vithalaraaya ||(aluvudyatako)