
ವಾಮದೇವ ವಿರಂಚಿತನಯ
ಉಮಾಮನೋಹರ ಉಘ್ರದುರ್ಜಟಿ
ಸಾಮಜಾಜಿನ ವಸನಭೂಷಣ
ಸುಮನ ಸೂಪ್ತಂಸಾ ||ವಾಮದೇವ||
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯ ನಳ ವಿಲೋಚನ ||ಕಾಮಹರ||
ಕಾಮಿತಪ್ರದ ಕರುಣಿಸೆಮಗೆ
ಸದಾ ಸುಮಂಗಳವಾ….ಆಆ..||ಕಾಮಿತ||
ಸದಾ ಸುಮಂಗಳವಾ. … ಸದಾ ಸುಮಂಗಳವಾ. …
ಅಂಭರಪುರ ಹರ ಶಂಭ ತ್ರಿಯಂಬಕ
ಶಂಭಾರಾರಿ ರಿಪು ಗಂಭೀರ ಕರುಣೆ
ಶಂಭೋ ಸ್ವಯಂಭೋ ಸಂಭವಾ ಆ…ಆ…||2||
ನಂಬಿದೆ ಕಾಯೋ ಜಂಭಾರಿನುತ ಭವಾ||2|| ||ಅಂಭರಪುರ||
ಜಂಭಾರಿನುತ ಭವಾ….
ಹಸಿತ ಭೂಷಿತ ಶರೀರ ಭಕ್ತರುಧ್ಧಾರ
ವಿಷಕಂಠ ದುರಿತ ಹರ||ಹಸಿತ||
ಪಶುಪತಿ ಫಣಿಪಹಾರ ಪಾವನಕಾರ
ತ್ರಿಶೂಲ ಢಮರುಗಧರ
ವಸನಲಯನವಿಕಸಿತಾಂಭುಜಮುಖ
ಶಶಿಧರ ಮಕರಕ್ಕಸ ಮದಮರ್ದನ||ವಸನ||
ಗಸನೆಗೊಳಿಪ ತಾಮಸವ ಕಳೆದು
ಮಾನಸದಲಿ ರಂಗನ ಬಿಸಜ ಪದವ ತೋರೊ ||1||
ರಜತ ಪರ್ವತ ನಿವಾಸ …ಆಆಆ..ಆಆ…
ರಜತ ಪರ್ವತ ನಿವಾಸ , ನಿರ್ಮಲ ಭಾಸ ,
ಗಜದೈತ ನಾಶ ಗಿರೀಶ||ರಜತ||
ಸುಜನರ ಮನೋವಿಲಾಸ , ವ್ಯೋಮಕೇಶ
ತ್ರಿಜಗ ತಲ್ಲಣ ಗೌರೀಶ
ಅಜಸುತನದ್ವಾರ ಭಜನೆಯ ಕೆಡಿಸಿದೆ
ಅಜಗರ ಮಂದಿರ ಗಜಮುಖ ಜನಕನೆ ||ಅಜಸುತನ||
ಗಜಗಮನೆ ಮುನಿ ತನುಜನ ಕಾಯ್ದನೆ
ಸ್ರಜಮುನಿ ವಂದಿತ ಭಜಿಸುವೆ ನಿನ್ನನು ||2||
ಮಧುರಾಪುರಿ ನಿಲಯ….ಆ….ಆ…ಆ…
ಮಧುರಾಪುರಿ ನಿಲಯ , ಮ್ರತ್ಯುಂಜಯ
ಸದಮಲ ಸುಮನಗೆಯ||ಮಧುರಾ||
ಸದಾನಮಿಪರ ಹ್ರದಯ ದೊಳಗುಲ್ಲ
ಭಯ ಸದೆಯುತ್ತ ಕೊಡು ಅಭಯ
ಸದಾಶಿವಜಾಹ್ನವಿ ಧರಕ್ರತ ಮಾಲ
ನದಿತೀರದಿ ವಾಸವಾಗಿರ್ಪ ಸೌಂದರ್ಯ ||ಸದಾಶಿವ||
ಮಧುರಿಪು ವಿಜಯವಿಠ್ಠಲನ ಪಾದಾಭ್ಜಕೆ
ಮಧುಪನೆಂಬ ಪಂಚ ವದನ ಕೈಲಾಸದ ||3||
Lyrics in English
Vamadeva viranchitanaya
umamanohara ughradurjati
samajajina vasanabhushana
sumana sooptasa ||
kamahara kailasa mandira
somasoorya Nala vilochana ||
kamitaprada karunisemage
Sada sumangalava … aa …….
Sada sumangalava ….. Sada sumangalava …….
Ambharapura hara shambha tryambaka
shambarari ripu gambhira karuṇe
shambha swayambho sambhavaa aa .. aa…. ||
nambide kayo jambharinuta bhava ||
jambharinuta bhava ….
Hasita bhushita sharira baktaroddhara
vishakantha duritahara |
pasupati panipahara pavanakari
trisula damaruga dhara |
vasalanayana vikasitanbuja mukha
shashidhara makarakkasa mada mardana |
gasanigolipa tamasava kaledu
manasadali rangana bisaja padava toro | 1 |
rajata parvata nivasa
nirmala bhasa gajadaitya nasha girisha |
sujanara mano vilasa vyomakesha
trijagadallana gaurisha |
ajasutanadhvara bajaneya kediside |
ajagara mandira gajamuka janakane |
gajagamane | muni tanujara kaydane
vrujamuni vandita bajisuve ninnanu | 2 |
madhurapura nilaya
mrutyunjaya sadamala sumanageya |
sada namipara hrudayadolagulla
bhaya sadeyutta kodu abaya
sadasiva janhavi dhara krutamala
nadi tiradi vasavagippa |saundarya
madhiripu vijaya vithalana padake
madhupanenipa panchavadana kailasada | 3 |