
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ || ಪ ||
ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂತಹ ನಾಲಿಗೆ || ಅ.ಪ ||
ಪ್ರಾತಃ ಕಾಲದೊಳೆದ್ದು ನಾಲಿಗೆ
ಶ್ರೀಪತಿ ಎನ್ನಬಾರದೆ ನಾಲಿಗೆ
ಪತಿತಪಾವನ ನಮ್ಮ ರತಿಪತಿ ಜನಕನ
ಸತತವು ನುಡಿ ಕಂಡ್ಯ ನಾಲಿಗೆ || ೧ ||
ಚಾಡಿಯ ಹೇಳಲು ಬೇಡ ನಾಲಿಗೆ
ನಿನ್ನ ಬೇಡಿ ಕೊಂಬೆನು ನಾಲಿಗೆ
ರೂಢಿಗೊಡೆಯ ಶ್ರೀ ರಾಮನ ನಾಮವ
ಪಾಡುತಲಿರು ಕಂಡ್ಯ ನಾಲಿಗೆ || ೨ ||
ಹರಿಯ ಸ್ಮರಣೆ ಮಾಡು ನಾಲಿಗೆ
ನರಹರಿಯ ಭಜಿಸು ಕಂಡ್ಯ ನಾಲಿಗೆ
ವರದ ಪುರಂದರ ವಿಠ್ಠಲರಾಯನ
ಚರಣ ಕಮಲ ನೆನೆ ನಾಲಿಗೆ || ೩ ||
Lyrics in English
Acharavillada naalige
ninna neecha buddhiya bidu nalige
vicharavillade parara dooshipudakke,
chaachi kondiruvantha naalige.. ll Achara ll
Pratahkaladoleddu naalige,
siri pathiyennabarade naalige
pathita pavana namma ratipatijanakana
sathathavu nudi kandya naalige ll1||
Chadi helalu beda nalige, ninna
bedikombuvenu nalige
roodhigodeya sriramana namava
paduthaliru kandya naalige ll 2 ll
Hariya smarane madu naalige
Narahariya bhajise kandya nalige
varada purandara vittalarayana
charana kamala nene naalige ||3 ||
Video link : This song from film Upasane, sung by S.Janaki & The song is composed by Purandara Dasaru https://youtu.be/VhSeotVnR08