
ಅನುದಿನ ನಿನ್ನ ನೆನೆದು
ಮನವು ನಿನ್ನಲಿ ನಿಲ್ಲಲಿ|ಪ|
ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆ
ಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ |1|
ನಿನ್ನ ಗುಣ ವರ್ಣಿಸುತ ನಿನ್ನವರ ಮನ್ನಿಸುತ
ನಿನ್ನ ಪಾವನ್ನ ಲಾವಣ್ಯ ಧ್ಯಾನಿಸೆ |2|
ಸಂತೋಷ ನಿರಂತರವು ಸಂತ ಜನ ಸಹವಾಸವು
ಶಾಂತತ್ವವಾಂತು ಮಹಾಂತಧೈರ್ಯದಿ |3|
ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣ
ಚಿತ್ತದೊಳಿತ್ತೆಲ್ಲ ಹೊತ್ತು ಹೊತ್ತಿಗೆ |4|
ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನ
ಧೈರ್ಯದಂತರ್ಯ ಗಾಂಭೀರ್ಯ ಭಾವದಿ |5|
Lyrics in English
Anudina ninna nenedu manavu ninnali nillali ||pa||
Duhkhasukha lekkisade mukhya phala mundarise mikkuta sokki mohakke sikkade mana ||
Ninna guna varnisuta ninnavara mannisuta ninna pavanna lavanya dhyanise mana ||1||
Santosha nirantaravu santajana sahavasavu shantatvavanta mahanta dhairyadi mana ||2||
Bhakti suvirakti dhyana muktige mukhya karana chittadolittalla hottu hottige mana ||3||
Priya shri lakshuminarayana parayananu dhairyadantarya gambhirya bhavadi mana ||4|
ಧನ್ಯವಾದಗಳು.
Thanks for posting Lyrics in kannada and English.