
ಅನ್ಯರಿಂದಲಿ ಸುಖವಾಯಿತು ಎಂಬುವುದಕಿಂತ ನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ
||ಅನ್ಯರಿಂದಲಿ||
ನಿನ್ನನರಿಯದೆ ಅನ್ಯರ ಬಲ್ಲೆನೆಂಬುದಕಿಂತ ಕಣ್ಣಿಲ್ಲದಿರುವ ಕುರುಡ ಮೇಲಯ್ಯಾ…ಆ…
||ನಿನ್ನನರಿಯದೆ||
ಪುಣ್ಯ ಪಾಪವರಿಯದೆ ಬದುಕುವ ಮನುಜನಿಗಿಂತ | ನಾಯಿ ಕುನ್ನಿ ಲೇಸಯ್ಯಾ….ಆ… |
ಗುಣ ಹೀನನಾದರು ಗುಣಹೀನನಾದರು ಸುಖ ದುಃಖಗಳು ನಿನ್ನಿಂದಾಯಿತೆಂಬ ಮತಿ |
ಚೆನ್ನಾಗಿ ತಿಳಿಸಯ್ಯ ಗೋಪಾಲ ವಿಠ್ಠಲ ||
ಗೋಪಾಲ ವಿಠ್ಠಲ, ಗೋಪಾಲ ವಿಠ್ಠಲಾ…ಆ…
ನಿನ್ನಾ ಒಲುಮೆಯಿಂದ ನಿಖಿಲಾ ಜನರು ಬಂದು ಮನ್ನಿಸುವರು ಮಹರಾಯ | ಎನ್ನ ಪುಣ್ಯಗಳಿಂದ, ಈ ಪರಿ ಉಂಟೇನೊ ನಿನ್ನದೆ ಸಕಲ ಸಂಪತ್ತು ದೇವ |ನಿನ್ನದೆ ಸಕಲ ಸಂಪತ್ತು
ಜೀರ್ಣಾ ಮಲಿನ ವಸ್ತ್ರ ಕಾಣದ ಮನುಜಗೆ ಪೂರ್ಣ ವಿಚಿತ್ರ ಸುವಸನ |ವರ್ಣ ವರ್ಣದಿಂದ ಬಾಹೋದೇನೊ | ಸಂಪೂರ್ಣ ಗುಣಾರ್ಣವ ದೇವ ||ನಿನ್ನ ಒಲುಮೆಯಿಂದ||
ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವದಕಿನ್ನು ತಬ್ಬಿಬ್ಬುಗೊಂಡೆನೊ ಹಿಂದೆ |ನಿಬ್ಬರದಿಂದಲಿ ಸರ್ವರ ಕೂಡುಂಬೊ || ಹಬ್ಬದೂಟವ ಉಣಿಸುವೆಯೊ || ನಿನ್ನ ಒಲುಮೆಯಿಂದ||
ಸಂಜೆ ತನಕ ಇದ್ದು ಸಣ್ಣ ಸೌಟಿನ ತುಂಬಾ ಗಂಜಿ ಕಾಣದೆ ಬಳಲಿದೆನೊ |ವ್ಯಂಜನ ಮೊದಲಾದ ನಾನಾ ರಸಂಗಳ | ಭುಂಜಿಸುವುದು ಮತ್ತೇನೋ || ನಿನ್ನ ಒಲುಮೆಯಿಂದ||
ಮನೆ ಮನೆ ತಿರುಗಿದರು ಕಾಸು ಪುಟ್ಟದೆ ಸುಮ್ಮನೆ ಶಾಲ್ವರಿದು ಬಳಲಿದೆನೊ|
ಹಣ ಹೊಣ್ಣು ದ್ರವ್ಯಗಳು ಇದ್ದಲ್ಲಿಗೆ ತನಗೆ ||
ಪ್ರಾಪ್ತಿ ನೋಡೋ ಜೀಯಾ…..ಆ… ||ನಿನ್ನ ಒಲುಮೆಯಿಂದ ||
ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾವೆ |
ಈ ಧರೆಯೊಳಗೆ ಸತ್ಪಾತ್ರರ ಜೊತೆಗುಂಬೊ ||2||
ಪಧ್ಧತಿ ನೋಡೋ ಪುಣ್ಯಾತ್ಮ…..ಆ…. ||ನಿನ್ನ ಒಲುಮೆಯಿಂದ||
ನೀಚೋಚ್ಛ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ |
ಯೋಚಿಸಿ ನೋಡಲು ಸೋಜಿಗವಾಗಿದೆ || ವಾಚಕ್ಕೆ ನಿಲುಕದು ಹರಿಯೇ….ಏ… ||ನಿನ್ನ ಒಲುಮೆಯಿಂದ||
ವೈದಿಕ ಪದವೀವಗೀ ಬಗೆ ಲೌಕಿಕ ವಿಧಿಸುವುದು ಬಲು ಖ್ಯಾತೆ |
ಮೈದುನಗೊಲಿದ ಶ್ರೀ ವಿಜಯವಿಠ್ಠಲ ನಿನ್ನ || ಪಾದಸಾಕ್ಷಿಯ ಅನುಭವವೋ…ಓ… ||ನಿನ್ನ ಒಲುಮೆಯಿಂದ||
Lyrics in English
Anyarindali sukhavaayitu embuvudakinta ninnindaayitemba klesha melayya || anyarindali ||
Ninnariyade anyara ballenemudakinta kannilladiruva kuruda melayya .. aa…. ||ninnanariyade||
Punya paapavariyade badukuva manujaniginta ||punya|| naayi kunni lesayyaa ….. aa…………………………. gunaheenanaadaru, gunaheenanaadaru sukha dukhagalu ninnindaayitemba mati chennaagi tilisayya gopaala vittala ||guna|| gopaala vittala, gopaala vittala … aa…….
Ninnaa olumeyinda nikhila janaru bandu mannisuvaru maharaaya | enna punyagalinda, e pari unteno, ninnade sakala sampattu deva ninnade sakala sampattu ||
Jeerna malina vastra, kaanada manujage poorna vichitra, suvasana |varna varnadinda baahodeno ||2|| sampoorna gunaarnava deva || ninna olumeyinda||
Obba hengasina hottege haakuvadakinnu, tabbibbugondeno hinde | nibbaradindali sarvara koodumbo ||2|| habbadootava unisuveyo ||ninna olumeyinda||
Sanje tanaka iddu sanna soutina tumbaa ganji kaanade balalideno | vyanjana modalaada naanaa rasangala | bhunjisuvudu matteno || ninna olumeyinda||
Mane mane tirugidaru, kaasu puttade summane shaalvaridu balalideno | hana honnu dravyagalu, iddalige tanage ||2|| praapti nodo jeeyaa … aa……. || ninna olumeyinda||
Madhyaanna kaalakke atithigalige anna meddenendare eyagaave | e dhareyolage satpaatrara jotegumbo||2|| paddati nodo punyaatma …. aa ….. ||ninna olumeyinda||
Neechoccha tiliyade sarvara charanakke chaachide nosala hastagala | yochisi nodalu sojigavaagide ||2|| vaachakke nilukadu hariye ….. a ….. ||ninna olumeyinda||
Vaidika padaveevagi bage loukika vidhisuvudu balu khyaate | maidunagolida sri vijayavittala ninna ||2|| paadasaakshiya anubhavavo …. o……||ninna olumeyinda||