ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ / Amma Nanu devarane benne

ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮಾ ||ಅಮ್ಮಾ||
ಎಲ್ಲ ಸೇರಿ ನನ್ನ ಬಾಯಿಗೆ ||2||
ಬೆಣ್ಣೆಯ ಮೆತ್ತಿದರಮ್ಮಾ ||ಅಮ್ಮಾ||

ನೀನೆ ನೋಡು ಬೆಣ್ಣೆ ಗಡಿಗೆ ||2||
ಸೂರಿನ ನಿಲುವಲ್ಲಿ ||ನೀನೆ||
ಹೇಗೆ ತಾನೆ ತೆಗೆಯಲಿ ಅಮ್ಮ ||2||
ನನ್ನ ಪುಟ್ಟ ಕೈಗಳಿಂದ  ||ಅಮ್ಮ||

ಶ್ಯಾಮ ಹೇಳಿದಾ…
ಶ್ಯಾಮ ಹೇಳಿದ ಬೆಣ್ಣೆ ಮೆತ್ತಿದ
ತನ್ನ ಬಾಯಿ ಒರಸುತ್ತ ||ಶ್ಯಾಮ||
ಬೆಣ್ಣೆ ಒರೆಸಿದ ಕೈಯಾ ||ಬೆಣ್ಣೆ||
ಬೆನ್ನ ಹಿಂದೆ ಮರೆಸುತ್ತಾ  ||ಅಮ್ಮ||

ಎತ್ತಿದ ಕೈಯ ಕಡೆಗೊಲನ್ನ ||2||
ಮೂಲೆಲಿಟ್ಟು ನಕ್ಕಳು ಗೋಪಿ ||2||
ಸೂರದಾಸ ಪ್ರಿಯ ಶ್ಯಾಮನಾ ||2||
ಮುತ್ತಿಟ್ಟು ನಕ್ಕಳು ಗೋಪಿ  ||ಅಮ್ಮ ||

Lyrics in English

Amma Nanu devarane benne kaddillammaa |
Ella seri nanna bayige |
benneya mettidarammaa || Amma Nanu ||

Neene nodu benne gadige |
soorina niluvalli ||
hege tane tegeyali Amma |
nanna putta kaigalinda || Amma Nanu ||

Syama helida ……
shyama helida benne mettida |
tanna bayige orasutta |
benne oresida kaiya |
benna Hinde maresutta | Amma Nanu ||

Ettida kaiya kadegolanna |
moolelittu nakkalu gopi ||
sooradasa priya shyamana |
muttittu nakkalu gopi || Amma Nanu ||

Leave a Reply