ಆರತಿಯ ಬೆಳಗಬನ್ನಿರೆ ಆರತಿಯ/Arathiya belagabannire

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ
ಪಾರ್ವತಿದೇವಿಯರಿಗೆ
ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ
ಆರತಿಯ ಬೆಳಗಬನ್ನಿರೆ ||ಪ||

ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು |
ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ ||1||

ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು
ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ ||2||

ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು |
ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ ||3||

ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ|
ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ ||4||

ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ|
ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ||5||

Lyrics in English

Arathiya belagabannire parvati deviyarige |
Kiruti kondadutali parvatarajana magalige|
Aratiya belagabannire ||pa||

Vale kathani chintaku myale sarige sara muttugalu|
Kalagejjesarapalinitta palakshana madadige ||1||

Rangumanikyada heralu bangaradabaranavittu |
Dundumallige mudidu kulita mangaladeviyarige||2||

Dundumuttina mukuryavu chandra balyabugudinittu
Dundu haradi kankanakamala dvaryanitta varijakshige ||3||

Jatimanikyada vanki nutanada nagamurige |
Pritiyali pitambranuttu jyotiyante holevo gaurige ||4||

Nilavarna bimeshakrishna dhyanamaduta krishnana
Nilakanthana sahita kulitvishalanetre parvatige ||5||


Leave a Reply