
ಆರು ಮೂರೆರಡೊಂದು ಸಾವಿರ
ಮೂರೆರಡು ಶತ ಶ್ವಾಶ ಜಪಗಳ
ಮೂರು ವಿಧ ಜೀವರೊಳಗಬ್ಜಜ
ಕಲ್ಪ ಪರ್ಯಂತಾ….
ಆ….ರಚಿಸಿ ಸತ್ವರಿಗೆ ಸುಖ
ಸಂಸಾರ ಮಿಶ್ರರಿಗಧಮ ಜನರಿಗ
ಅಪಾರ ದುಖಃಗಳವೀವ ಗುರು
ಪವಮಾನ ಸಲಹೆನ್ನಾ….||೨||
ನಾನೇನು ನಿನಗೆಂದೆನೋ ಬಿಡದೆ
ಪವಮಾನ ಪಾಲಿಸೊ ಎನ್ನನೂ||ನಾನೇನು||
ದೀನರ ಪಾಲಿಪ ದಾನವಾಂತಕ
ನಿನ್ನ ಜ್ಞಾನಾನಂದದ
ನಾಮ ಧ್ಯಾನವಗೈದೆನೋ ||ನಾನೇನು||
ಎರಡನೆ ಯುಗದಲ್ಲೀ||೨||
ಶರಧಿ ಲಂಘಿಸಿ ರಘುವರನ ಕುಶಲವಾರ್ತೆ
ಧರಿಜಾತೆಗೆ ಅರುಹಿ
ದಶಾಶ್ಯನ ಪುರವ ದಹಿಸಿದಂತ
ಪರಮಸಮರ್ಥ ನೀನೆಂದರಿತು ಕೊಂಡಾಡಿದೆ
ತರುಚರವರನೆಂದೆನೇ
ಶಿರದಿ ಕಲ್ಲು ಧರಿಸಿ ತಂದವನೆಂಬೆನೆ
ಬ್ರಹ್ಮಾಸ್ತ್ರಕೆ ಭರದಿ ಸಿಲುಕಿದೆನೆಂಬೆನೆ
ಭಕ್ತಿಲಿ ಭಾವಿ ಸರಸಿಜಾಸನನೆಂದು
ಸ್ಮರಿಸಿದೆನಲ್ಲದೆ ||ನಾನೇನು||
ತೃತೀಯ ಯುಗದಿ
ಕುಂತಿ ಸುತನಾಗಿ ಜನಿಸುತಾ… ||ತೃತೀಯ||
ರತಿಪತಿಪಿತನಂಘ್ರಿ ಭಜಿಸುತಲೀ
ಕ್ಷಿತಿಯ ಭಾರಕೆ ಖಳರೆಲ್ಲರ
ಸಂಹರಿಸಿದ ಪ್ರತಿಮ ನೀನೆಂದು
ಸ್ತುತಿಸಿದೆನಲ್ಲದೆ
ಮತಿವಂತ ನೀನೆಂಬೆನೆ
ದನುಜಾತೆಗೆ ಪತಿಯಾದವನೆಂಬೆನೆ
ಅವಳ ಕೂಡ ಸುತನ ಹೆತ್ತವನೆಂಬೆನೆ
ಯಾಮಿನಿಯಲ್ಲಿ ಪತಿಯೆನಿಸಿದೆಂಬೆನೆ
ನಿನ್ನನು ಬಿಟ್ಟು ಗತಿ ನಮಗಿಲ್ಲೆಂದು
ಸ್ತುತಿಸಿದೆನಲ್ಲದೆ ||ನಾನೇನು||
ನಡುಮನೆ ಸುತನಾಗೀ.. ||೨||
ಪೊಡವಿಯೊಳಗೆ ಹುಟ್ಟಿ
ಉಡುಪಿ ಕ್ಷೇತ್ರದಿ ಶ್ಯಾಮಸುಂದರನ ||ನಡುಮನೆ||
ಧೃಡವಾಗಿ ಸ್ಥಾಪಿಸಿ
ಜಡ ಮಾಯಿಗಳ ಗೆದ್ದ
ಸಡಗರ ಮುನಿಯೆಂದು
ನುಡಿದೆ ಹುರುಳಿಯ ಮೆದ್ದ
ಬಡ ದ್ವಿಜ ಶಿಶು ಎಂದೆನೆ
ಎತ್ತಿನ ಬಾಲ ಹಿಡಿದೋಡಿದವನೆಂದೆನೇ
ಬೇಸರದಿಂದ ಮಡದಿ ಬಿಟ್ಟವನೆಂದೆನೇ
ಕಡೆಗೆ ಬೋರೆ ಗಿಡವ ಸೇರಿದೆನೆಂದನೇ
ನಿನ್ನ ಒಡೆಯನ ತೋರೆಂದು
ಅಡಿಗಳಿಗೆರಗುವೆ ||ನಾನೇನು||
Lyrics in English
Aaru mooreradondu savira
mooreradu shata shwaasha japagala
mooru vidha jeevarolagabjaja
kalpa paryanta …..
Aa… rachiai satvarige sukha
samsara mishrarigadhama janariga
apaara dukhagalaveeva guru
pavamana salahennaa …..
Naanenu ninagendeno bidade
pavamana paliso ennanoo ||
deenara palipa danavantaka
ninna jnananandana
naama dhyanavagaideno ||
Eradane yugadalli ||2||
sharadhi langhisi raghuvarana kushalavarte
dharijatege aruhi
dashashyana purava dahisidanta
parama samartha neenendaritu kondadide
tarucharavaranendene
shiradi kallu dhariai tandavanembene
brahmastrake bharadi silukidenembene
bhaktili bhavi sarasijasananendu
smarisidenallade ||
Tratiya yugadi kunti sutanagi janisuta …. ||
Ratipatipitananghri bhajiautali
kahitiya bharake khalarellara
samharisida pratima neenendu
stutisidenallade mativanta neenembene
danujatege patiyadavanembene
avala kooda sutana hettavanembene
yaminiyalli patiyenisidembene
ninnanu bittu gati namagillendu
stutisidenallade ||
Nadumane sutanagi …. ||2||
podaviyolage hutti Udupi kshetradi shyamasundarana ||
dhradavagi stapisi jadamayigala gedda
sadagara muniyendu
nudide huruliya medda
bada dwija shishu endene
ettina bàla hididodidavanendene
besaradinda madadi bittavanendene
kadege bore gidava seridenwndane
ninna odeyana torendu adigaligeraguve ||