ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ / Indu Ninna moreya hokke venkateshane

ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ     ||ಇಂದು||
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||೨||  ||ಇಂದು||

ಶೇಷಗಿರಿಯವಾಸ ಶ್ರೀಶ ದೋಷರಹಿತನೇ       ||ಶೇಷ||
ಏಸು ದಿನಕು ನಿನ್ನ ಪಾದ ದಾಸನು ನಾನೆ        ||ಏಸು||
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||ಕ್ಲೇಶ|| || ಇಂದು ||

ಕಮಲನಯನ ಕಾಮಜನಕ ಕರುಣವಾರಿಧೇ         ||ಕಮಲ||
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ  ||ಇಂದು||

ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ        ||ಉರಗ||
ಶರಣಪಾಲ ಬಿರುದು ತೋರಿ ಪೊರೆವ ದೇವನೆ           ||ಶರಣ||
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ       ||ಇಂದು||

Lyrics in English

Indu Ninna moreya hokke venkateshane ||
endigadarenna kayo srinivasane || Indu ||

Sheshagiriya vasa shreesha dosharahitane |
esu dinaku Ninna pada dasanu naane |
kleshagaisadiru Enna swamiye neene || Indu ||

Kamalanayana kamajanaka karunavaridhe |
rameyanalva kamalanabha he dayanidhe |
yamana puradi shikshisadiru parthasarathe || Indu ||

Uragashayana surarigodeya siriya ramanana |
sharanapala birudu Tori poreva devane |
karunisenage mukutiyu purandaravittalana || Indu |

Leave a Reply