ಇಂದು ಶುಕ್ರವಾರ ಶುಭವ ತರುವ / Indu shukravaara shubhava taruva

ಸರ್ವ ಮಂಗಳ ಮಾಂಗಲ್ಯೆ ಶಿವೇ ಸರ್ವಾರ್ಥ ಸಾಧಕೇ
ಶರಣ್ಯೇ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತೇ !

ಇಂದು ಶುಕ್ರವಾರ ಶುಭವ ತರುವ ವಾರ ||ಇಂದು||
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ ‌‌‌‌‌ ||ಇಂದು||

ಮುಂಜಾನೆ ಮಡಿಯುಟ್ಟು ಕುಂಕುಮವ ಹಣೆಗಿಟ್ಟು
ರಂಗೋಲಿಯ ಬಾಗಿಲಿಗಿಟ್ಟು ಹಣ್ಣು ಕಾಯ ನೀಡುವ ವಾರ
||ಇಂದು||

ಮಲ್ಲಿಗೆ ಜಾಜಿ ಹೂ ಮಾಲೆ ಹಾಕಿ ಚಂದನ ಹಚ್ಚಿ ಸಿಂಗಾರ ಮಾಡಿ ||ಮಲ್ಲಿಗೆ||
ಕರ್ಪೂರದಾರತಿ ನಿನಗೆ ಬೆಳಗಿ ಭಕ್ತಿಯಿಂದಲಿ ಭಜಿಸುವ ವಾರ
‌ ‌ ||ಇಂದು||

ಸುವಾಸಿನಿಯರಿಗೆ ಕುಂಕುಮ ಹಚ್ಚಿ ಸಂಭ್ರಮದಿಂದ ಭಾಗಿನ ನೀಡಿ ||ಸುವಾಸಿನಿ||
ಸರ್ವಮಂಗಳೆಯಕೀರ್ತಿಯ ಹಾಡಿ ಸಕಲ ಭಾಗ್ಯವ ಬೇಡುವ ವಾರ ||ಇಂದು||

lyrics in English

Sarva Mangala Maangalye Shive Sarvaarta Saadake
Sharanye Trayambake Devee Naaraayani Namostuthe

Indhu shukravaara shubhava taruva vaara
Sumangaliyarella ninna poojisuva punyavaara ||

Munjaaneya madiuttu kumkumava hanegittu
Rangoliya baagiligittu hannu kaaayi needuva vaara ||

Mallige jaaji hoomaale haaki chandana hacchi singara maadi
Karpoora daarati ninage belagi bhakti indali bajisuva vaara ||

Suvaasiniyarige kumkuma hacchi sambramadindha baagina needi
Sarva mangaleya keerthiya haadi sakala bhaagyava beduva vaara ||


Leave a Reply