ಇದೋ ನಿನಗೆ ವಂದನೆ / Edo ninage vandane

ಇದೋ ನಿನಗೆ ವಂದನೆ ಸದಾ ಆದಿವಂದ್ಯನೆ ||2||
ಪದೇ ಪದೇ ವಂದನೆ ಬುಧಾವಳಿ ಸುಸೇವ್ಯನೆ ||ಪದೇ||
||ಇದೋ||

ಮಾರಹರನ ಸುತನೆ ನಿನ್ನ ಚಾರುಚರಿತೆ ಕೇಳ್ವ ಜನರ ||ಮಾರ||
ಅಪಾರ ದುಃಖ ಕಳೆವ ಸಾರ ಚಾರುದೇಷ್ಣ ನಿನಗೊಂದನೆ ||ಅಪಾರ||
||ಇದೋ||

ಸೂರ್ಪಕರ್ಣ ದುರ್ಜನಂಗಳ ದರ್ಪಗಳನು ತರಿವ ಪ್ರಭುವೆ||ಸೂರ್ಪ||
ಅರ್ಪಿಸುವೆನು ನಿನಗೆ ಎಲ್ಲಾ ಸರ್ಪಗೊರಳ ಸುತನೆ ಹಿತನೆ ||ಅರ್ಪಿಸುವೆನು||
||ಇದೋ||

ಈಶ ವೇದವ್ಯಾಸ ದಾಸ ಆಸೆಯಿಂದ ನಿನ್ನ ಭಜಿಪೆ||ಈಶ||
ಲೇಶ ಮಾತ್ರ ನಿನ್ನ ಕರುಣೆ ಸೂಸೆ ಭದ್ರನೆನಿಸುವೆನು||ಲೇಶ||
||ಇದೋ||

Lyrics in English

Edo ninage vandane sadaa adivandyane ||2 times || pade pade vandane budhavali susevyane ||pade|| ||Edo||

Maaraharana sutane ninna charucharite kelva janara | apaara dukha kaleva saara chaarudeshna ninagondane|| ||edo||

Soorpakarna durjanangala darpagalanu tariva prabhuve |arpisuvenu ninage ellaa sarpagorala sutane hitane ||edo||

Esha vedavyasa daasa aseyinda ninna bhajisi | lesha maatra ninna karune soose bhadranenisuvenu ||edo||


Leave a Reply