ಉಗಾಭೋಗ / Ugabhoga

ಎಷ್ಟು ಮಂದಿ ಧರಣಿ ಆಳಿ ಅರಸುಗಳೆನಿಸಿ
ನಷ್ಟವಾಗಿ ಪೋದರಲ್ಲ ನೋಡನೋಡಾ
ಕಟ್ಟಿಕೊಂಡೊಯ್ದರೆ ತೃಣವಾದರು ಹಿಂದೆ
ಇಷ್ಟನಿಷ್ಟಕ್ಕೆ ಪಾತ್ರರಾಗುವರು

ದಿಟ್ಟ ತಾ ಹರಿಗೋಲದಾಟಿಪನೊಂದು
ಹುಟ್ಟಲಿ ನೀರು ತಿರುಹಿ ಕಡೆ ದಾಟಿಸೆ
ಹುಟ್ಟಿದ ಆ ಕೀರ್ತಿ ಹಾಕಿದವನದು ಎಂದು
ಕೊಟ್ಟ ವರವಗುಂಟು ಬಹುಮಾನವ

ಎಷ್ಟೇ ಉದಕದಿ ಹುಟ್ಟು ಹೊರಳಿ ಆಡಿದರದಕೆ
ಎಷ್ಟು ಹತ್ತೋದು ಜಲವು ಅಷ್ಟೇ ಅಲ್ಲದೆ
ಇಷ್ಟು ಹರಿಯಾಧೀನ ನಂಬಿದಂಬಿಗನೈಯ್ಯ |
ಇಷ್ಟರೊಳು ಚಲುವ ಗೋಪಾಲವಿಠಲ ಇಷ್ಟನಾಗಿ ಸರ್ವಾಭೀಷ್ಟಗಳನೀವ

Lyrics in English

Eshtu mandiya dharani aali arasugalenisi
nashtavagi podaralla nodanoda
kattikondoydare tranavadaru hinde
ishtanishtakke patraraguvaru

Ditta taa harigoladatipanondu
huttali neeru tiruhi Kade datise
huttida aa Keerthi hakidavanadu
kotta varavaguntu bahumanava

Eshtu udakadi huttu horali aadidaradake
Eshtu hattodu jalavu ashte allade
ishtu hariyadheena nambidambiganaiyya
ishtarolu chaluva gopalavittala ishtanagi sarvabhishtagalaneeva

Leave a Reply