ಉದರ ಪೂರ್ತಿಯ ಕೊಡದಿರು / Udara purtiya kodadiru

ಉದರ ಪೂರ್ತಿಯ ಕೊಡದಿರು ಉದಧಿಶಯನ |
ಮುದದಿ ನಿನ್ನನು ನೆನೆದು ಮಲಗುವೆನೊ ಹರಿಯೇ ||ಉದರ||

ಮುದದಿ ನಿನ್ನ ಚರಣವನು ಸ್ಮರಿಸುವುದು ಪರಿಹಾರವು ಬಹು
ಗರ್ವ ಹೆಚ್ಚುವುದು ಎನಗೆ |
ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ |
ಪರಿಹಾಸ್ಯ ನುಡಿಯಲ್ಲ ಪರಮ ಪಾವನನೆ ||ಉದರ||

ತನುಮನವು ನಿನ್ನ ವಿಷಯಕ್ಕೆರಗಲಿ
ಅನುಮಾನವಿದ್ದ ಪರಿಯೆಲ್ಲ ತೊಲಗಲಿ |
ವನಜಸಂಭವನೈಯ್ಯ ವೈಕುಂಠಪತಿ ನಿನಗೆ |
ಅನವರತ ದೊರೆ ಎಂಬೊ ಘನತೆ ತಪ್ಪದೆ ಇರಲಿ ||ಉದರ||

ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ
ಅಜಮಿಳಗೆ ಒಲಿದಂತೆ ಎನಗೆ ಒಲಿದೂ |
ಸುಜನ ರಕ್ಷಕನೆಂಬೊ ಬಿರುದು ಬೇಕಾದರೆ |
ನಿಜವಾಗಿ ದಯಮಾಡೊ ವಿಜಯವಿಠ್ಠಲನೇ ||ಉದರ||

Lyrics in English

Composer : Sri Vijaya dasaru

Udara purtiya kodadiru udadhishayana |
mudadi ninnanu nenedu malaguveno hariye || udara ||


Mudadi ninna charanavanu smarisuvudu pariharavu bahu
garva hecchuvudu enage |
aravindanabha hari varavide ninna kelve |
parihasya nudiyalla parama pavanane ||udara ||


Tanumanavu ninna vishayakkeragali
anumanavidda pariyella tolagali |
vanajasambhavannayya vaikuntapati ninage |
anavarata dore ebo ghanate tappade erali || udara ||


Gajamadadi kangetta pariyanna madade
ajamilage olidante enage olidu |
sujara rakshakanembo birudu bekaadare |
nijavagi dayamado vijayavittala
ne || udara ||


Audio and video link not available at present. I will post as soon as I get it.

Leave a Reply