ಎಂಥಾ ವೈರಾಗ್ಯ ಹನುಮಂತ / Entha vairagya hanumantha

ಎಂಥಾ ವೈರಾಗ್ಯ ಹನುಮಂತ ಎಂಥಾ ಸೌಭಾಗ್ಯ ಗುಣವಂತ |
ಸಂತತ ರಾಘವನಂಘ್ರಿ ಕಮಲದಲಿ ಅಂತರಂಗ ಭಕುತಿಯ ಬೇಡಿದೆಯೊ ||ಎಂಥಾ ವೈರಾಗ್ಯ||

ಆವರಿಹರು ನಿನ್ಹೊರತು ರಾಘವರ ಭಾವವರಿತು ಪ್ರತಿ ಕ್ಷಣಗಳಲಿ |ಸೇವೆ ಸಲಿಸಿ ದಯ ಪಡೆಯಲು ಭೋಗವ
ದಾವದನುಭವಿಸೆ ದುರ್ಲಭವು| ಜೀವೋತ್ತಮನದ ಬಯಸದೆ
ಏಕೋಭಾವದಿ ಪದಸೇವೆಯ ಕೇಳಿದ ವೀರ ||ಎಂಥಾ ವೈರಾಗ್ಯ||

ಜ್ಞಾನಪರಾಕ್ರಮ ಧ್ಯೆರ್ಯವೀರ್ಯಕಧಿಷ್ಠಾನ ಪವನಸುತ ಜಗತ್ರಾಣ | ನೀನಲ್ಲದೆ ಖಗಮೃಗ ಸುರನರರುಗಳೇನು
ಚಲಿಸಬಲ್ಲರೊ ಹನುಮ|ಪ್ರಾಣಭಾವಿ ಚತುರಾನನ ಭುವಿಯೊಳಗೇನು ರುಚಿಯೊ ಕಲ್ಯಾಣಚರಿತ ನಿನಗೆ
||ಎಂಥಾ ವೈರಾಗ್ಯ||

ಕಪಿ ರೂಪದಿ ದಶಕಂಧರನ ಮಹಾ ಅಪರಾಧಕ್ಕೆ ಶಿಕ್ಷೆಯನಿತ್ತೆ ನೃಪರೂಪದಿ ದುರ್ಯೋಧನನಸುವನು | ಅಪಹರಿಸಿದೆಯೋ ಬಲ ಭೀಮ| ವಿಪುಲ ಪ್ರಮತಿ ವರವೈಷ್ಣವ ತತ್ವಗಳುಪದೇಶಿಸಿದ ಪ್ರಸನ್ನ ಯತಿವರೇಣ್ಯ ||ಎಂಥಾ ವೈರಾಗ್ಯ||

Lyrics in English

Entha vairagya hanumantha | entha soubhagya gunavantha | santata raghavananghri kamaladali | antaranga bhakutiya bedideyo ||entha vairagya ||

Aavariharu ninhoratu raghavara | bhavavaritu prati kshanagalali | seve salisi daya padeyalu bhogava davadanubhavise durlabhavu | jeevottamanada bayasade ekobhavadi padaseveya kelida veera ||entha vairagya||

Jnaana parakrama dhairyaveeryakadhishtaana pavanasuta jagatrana | neenalllade khagamruga suranararugalenu | chalisaballaro hanuma | pranabhavi chaturanana bhuviyolagenu ruchiyo kalyana charita ninage || entha vairagya ||

Kapi roopadi dashkandharana maha aparadhakke shiksheyanitte nrupa roopadi duryodhananasuvanu | apaharisideyo bala bheema | vipula pramati vara vaishnava tatvagalupadeshisida prasanna yativarenya || entha vairagya ||


Leave a Reply