
ರಾಗ: ಶಂಕರಾಭರಣ ತಾಳ: ತ್ರಿಪುಟ
ಎಲ್ಯಾಡಿ ಬಂದ್ಯೋ ಎನ್ನ ರಂಗಯ್ಯಾ ನೀ
ಎಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ||ಪ||
ಆಲಯದೊಳಗೆ ನೀನಾಡದೆ
ಚಿನಿ ಪಾಲು ಸಕ್ಕರೆ ನೀನೊಲ್ಲದೆ
ಚಿಕ್ಕ ಬಾಲರೊಡನೆ ಕೂಡ್ಯಾಡದೆ ಮುದ್ದು
ಬಾಲಯ್ಯ ನೀ ಎನ್ನ ಕಣ್ಣ ಮುಂದಾಡದೆ ||೧||
ಬಟ್ಟ ಮುತ್ತಿನ ಬೊಗಸೆ ಕಂಗಳು ಪಣೆಯೊಳಿಟ್ಟ
ಕಸ್ತೂರಿ ತಿಲಕದಂದವು ದಿಟ್ಟತನದಿ
ಕೂಡ್ಯಾಡಲು ಪುಟ್ಟ ಕೃಷ್ಣಯ್ಯ
ನೀ ಎನ್ನ ಕಣ್ಣ ಮುಂದಾಡದೆ ||೨||
ಅಷ್ಟ ದಿಕ್ಕಿಲಿ ಅರಸಿ ಕಾಣದೆ ಬಹಳ
ದೃಷ್ಟಿಗೆಟ್ಟೆನು ನಿನ್ನ ನೋಡದೆ ಇನ್ನೆಷ್ಟು
ಹೇಳಲಿ ಕೇಳಬಾರದೆ ರಂಗ ವಿಠಲ
ನೀ ಎನ್ನ ಕಣ್ಣ ಮುಂದಾಡದೆ ||೩||
Lyrics in English
Elladi bandyo Enna rangayya nee
elladi bandyo Enna Kanna mundadade ||pa||
Aalayadolage neenadade
chini Paul sakkare neenollade
chikka balarodane koodyadade muddu
balayya nee Enna Kanna mundadade ||1||
Batta muttina bogase kangalu paneyolitta
kasturi tilakadandavu dittatanadi
koodyadalu putta krishnayya
nee Enna Kanna mundadade ||2||
Ashta dikkili arasi kanade bahala
drishtigettenu Ninna nodade inneshtu
helali kelabarade Ranga vittala
nee Enna Kanna mundadade ||3||