
ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು || ಪ ||
ಜ್ಞಾನ ಭಕ್ತಿ ಕೊಡು ಎಮಗೆ ಇದೊಂದೇ ದೊಡ್ಡದು || ಅ.ಪ ||
ಒಂದು ನೆವದಿಂದ ಎನ್ನ ಕಾಡಿದವರಿಗೆ | ಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆ | ಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆ | ಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ || ೧ ||
ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿ | ಮುಂದೆ ನನ್ನ ಬೈವುಯವರೆಲ್ಲಾ ಅಂದಣವೇರಲಿ | ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ | ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ || ೨ ||
ಜನರೊಳಗೆ ಮಾನಭಂಗ ಮಾಡಿದವರಿಗೆ | ಜೇನು ತುಪ್ಪ ಸಕ್ಕರೆ ಊಟ ಆಗಲಿ ಅವರಿಗೆ | ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ | ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ || ೩ ||
Lyrics in English
yenu olle hariye ninna stuthisi keluvudu
gnana bhakthi kodu yanage idhonde doddadu
ondu neva dinda nanna kaadidavarige
hennu honnu gandu makkalu agali avarige
kandi kundhi yenna bhadhe padisidavarige
kanya danada phala bandhu tataali avarige ||1||
hindhe nanna baidhavarella chendagirali
mundhe nanna baivuyavarella andanaverali
kundu ittawarella kudereya katti balali
bandhu vaddhavarege bhattadha gadde beleyali ||2||
janara olage maanabhanga madidavarige
jenu tuppa sakkare oota agali avarige
haani baradhantha loka agali avarige
mahanubhava mukthiya koduva nele adhikeshava ||3||