ಏನು ಹೇಳಲಿ ತಂಗಿ / Enu helali tangi timmayyana

ರಚನೆ : ಶ್ರೀ ಪುರಂದರ ದಾಸರು

ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ
ಕನಸು ಕಂಡೆನ ಮನದಲಿ ಕಳವಳಗೊ೦ಡೆನೆ||ಪ||

ಪೋನ್ನದ ಕಡಗನಿಟ್ಟು ತಿಮ್ಮಯ್ಯತಾ
ಪೋಲ್ವ ನಾಮವ ಇಟ್ಟು ಅ೦ದುಗೆ ಘಲುಗೆನ್ನುತ
ಎನ ಮುಂದೆ ಬಂದು ನಿಂತಿದ್ದನಲ್ಲೇ ||1||

ಮಕರ ಕು೦ಡಲವನಿಟ್ಟು ತಿಮ್ಮಯ್ಯ ತಾ
ಕಸ್ತೂರಿ ತಿಲಕವನಿಟ್ಟು ಗೆಜ್ಜೆ ಘಲುಗೆನುತ
ಸ್ವಾಮಿ ತಾ ಬಂದು ನಿಂತಿದ್ದನಲ್ಲೇ ||2||

ಮುತ್ತಿನ ಪಲ್ಲಕ್ಕಿ ಯತಿಗಳು
ಹೊತ್ತು ನಿಂತಿದ್ದರಲ್ಲೇ ಛತ್ರಚಾಮರದಿಂದ
ರಂಗಯ್ಯನ ಸೇವೆಯ ಮಾಡುವರೇ ||3||

ತಾಮರ ಕಮಲದಲಿ ಕೃಷ್ಣಯ್ಯ ತಾ
ಬಂದು ನಿಂತಿದನಲ್ಲೇ ವಾಯು ಬೋಮ್ಮದಿಗಳು
ರಂಗಯ್ಯನ ಸೇವೆಯ ಮಾಡುವರೇ ||4||

ನವರತ್ನ ಕೆತ್ತಿಸಿದ ಸ್ವಾಮಿ ಎನ್ನ
ಹೃದಯಮ೦ಟಪದಲ್ಲಿ ಸವಾ೯ಭರಣದಿಂದ
ಪುರಂದರವಿಠಲನ ಕೂಡಿದೇನೆ ||5||

Lyrics in English


Enu helali tangi timmayyana padavanu kande
kanasukandene manadalli kalavalagondene || pa ||

Ponnada kadaganittu timmayya ta
Polva namava ittu anduge galugennuta
Ena munde bandu nintiddanalle || 1 ||

Makarakundalavanittu timmayya ta
Kasturi tilakavanittu gejje Galugenuta
Svami ta bandu nintiddanalle || 2 ||

Muttina pallakki yatigalu
Hottu nintiddaralle Chatra chamaradinda
Rangayyana utsava murutiya || 3 ||

Tamara kamaladali krushnayya ta
Bandu nintiddanalle vayu bommadigalu
Rangayyana seveya maduvare || 4 ||

Navaratna kettisida svami enna
Hrudayamantapadalli sarvabaranadinda
Purandaravithalana kudidene || 5 ||

———————————

Leave a Reply