ಏಳು ನಾರಾಯಣ ಏಳು /Yelu narayanane elu lakshmi

ಕೀರ್ತನಕಾರರು : ಕನಕದಾಸರು 

ಏಳು ನಾರಾಯಣ ಏಳು ಲಕ್ಷ್ಮೀರಮಣ                 ।।ಪ॥

ಏಳು ಶ್ರೀಗಿರಿ ಒಡೆಯ ಶ್ರೀವೆಂಕಟೇಶ
ಏಳಯ್ಯ ಬೆಳಗಾಯಿತು              ।।ಅ.ಪ॥ 

ಕಾಸಿದ್ದ ಹಾಲನ್ನು ಕಾವಡಿಯೊಳು ಹೆಪ್ಪಿಟ್ಟು
ಲೇಸಾಗಿ ಕಡೆದು ಹೊಸಬೆಣ್ಣೆ ಕೊಡುವೆ
ಶೇಷಶಯನನೆ ಏಳು ಸಮುದ್ರ ಮಥನವ ಮಾಡು
ದೇಶ ಕೆಂಪಾಯಿತು ಏಳಯ್ಯ ಹರಿಯೇ    ।।೧।।

ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿದ್ದಾರೆ ಬಲು ಭಕುತಿಯಿಂದ
ಅರವಿಂದನಾಭ ಸಿರಿ ವಿಧಿಭವಾದಿಗಳೊಡೆಯ
ಹಿರಿದಾಗಿ ಕೋಳಿ ಕೂಗಿತೇಳಯ್ಯ ಹರಿಯೇ।।೨।।

ದಾಸರೆಲ್ಲರು ಬಂದು ಧೂಳಿ ದರ್ಶನ ಗೊಂಡು
ಲೇಸಾಗಿ ತಾಳ ದಂಡಿಗೆಯ ಪಿಡಿದು
ಶ್ರೀಶನೆಲೆಯಾದಿ ಕೇಶವ ನಿಮ್ಮ ಪಾದವನು
ಲೇಸಾಗಿ ಸ್ಮರಿಸಿ ಪೊಗಳುವರು ಹರಿಯೇ ।।೩।।

Lyrics in English

Yelu narayanane elu lakshmi ramana ||pa||

Elu shri giriyodeya venkatesha Elayya belagayitu ||a.pa||

Kaasidda haalannu kaavadiyolu heppittu
lesaagi kadedu hosabenne koduve
shesha shayanane elu samudra mathanava maadu
desha kempaayitu elayya hariye |1

Aralu mallige jaaji parimalada pushpagala
suraru tandiddaare balu bhaktiyinda
Aravindanaabha siri vidhi bhavaadigalodeya
lochana madhanagoplalakrishna
hiridaagi koli koogitu elayya hariye ||2

Dasarellaru bandu dhooli darshana gondu
lesaagi taala dandigeyanu pididu
shreesha neleyaadi keshava nimma paadavanu
lesaagi smarisi pogaluvaru hariye |3|

…………………………..

Leave a Reply