
ಒಂದೇ ಮನದಲಿ ಭಜಿಸು ವಾಗ್ದೇವಿಯ ||ಪ||
ಇಂದು ಮತಿ ಕೊಡುವಳು ಶ್ರೀಹರಿಯ ಧ್ಯಾನದಲಿ ||ಅ ಪ||
ಹಿಂದೆ ಪ್ರಹ್ಲಾದನು ಕಮಲಜನ ಸತಿಗೆರಗಿ ನಿಂದು ಆರಾಧಿಸಲು ಹರಿವಿಶ್ವಮಯನೆಂದು | ಬಂದು ವಿಘ್ನವ ಕಳೆದು ಭಾವಶುದ್ಧಿಯನ್ನಿತ್ತು | ಹೊಂದಿಸಿದಳಾಗ ಶ್ರೀಹರಿಯ ಚರಣದಲ್ಲಿ ||೧||
ಅಂದು ದಶಮುಖನನುಜ ವಂದಿಸದೆ ವಾಣಿಯನು | ಬಂದು ತಪವನು ಗೈಯೆ ಬಹುಕಾಲಕೆ |ಅಂದದಿಂದಾಗಮೆಚ್ಚಿ ವರವಧಿಕ ಬೇಡೆನಲು |ನಿಂದು ಜಿಹ್ವೆಯಲಿ ನಿದ್ರೆಯ ಬೇಡಿಸಿದಳು ||೨||
ಅರಿತು ಭಜಿಸಲು ಬಿಡದೆ ಅಜನರಸಿಯ ನಿತ್ಯ ಉರುತರ ವಾಕ್ ಶುದ್ಧಿಯನ್ನಿತ್ತು |ನಿರುತ ಶ್ರೀಪುರಂದರವಿಠಲನ ಸೇವೆಯೊಳು | ಪರತತ್ತ್ವವಾದ ಕಥಾಮೃತವನುಣಿಸುವಳು ||೩||
Lyrics in English
Onde manadali bhajisu vagdeviya ||pa||
Indu mati koduvalu shrihariya dhyanadali ||a pa||
Hinde prahladanu kamalajana satigeragi nindu aaradhisalu harivishvamayanendu |bandu vignava kaledu bhavashuddhiyannittu | hondisidalaga shrihariya charanadalli ||1||
Andu dashamukananuja vandisade vaniyanu |
bandu tapavanu gaiye bahukalake |
andadindagamecchi varavadhika bedenalu |
nindu jihveyali nidreya bedisidalu ||2||
Aritu bhajisalu bidade ajanarasiya nitya urutara vak shuddhiyannittu |
niruta shri purandaravithalana seveyolu | paratattvavada kathamrutavanunisuvalu ||3||
nice