ಕಂಡೆ ಕಂಡೆ ಸ್ವಾಮಿಯ / Kande kande swamiya

ಕಂಡೆ ಕಂಡೆ ಸ್ವಾಮಿಯ ,ಬೇಡಿ ಕೊಂಡೆ||2||
ಕಂಡೆ ಕಂಡೆ ಸ್ವಾಮಿಯಾ…

ಕಂಡೆ ತಿರುಪತಿ ವೆಂಟೇಶನ ಕಾರಣಾತ್ಮಕ ಸಾರ್ವಭೌಮನ ಕಾಮಿತಾರ್ಥಗಳೀವ ದೇವನ
ಕರುಣನಿಧಿ ಎಂದೆನಿಸಿ ಮೆರೆವನ. ||ಕಂಡೆ ಕಂಡೆ||

ಕೋಟಿ ಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು |ನೋಟಕಾಶ್ಚರ್ಯವಾದ ನಗೆಮುಖ ನೊಸಲಿನಲಿ ತಿರುಮಣಿಯ ಕಂಡೆನು|
ಸಾಟಿ ಇಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು| ಬೂಟಕದ ಮಾತಲ್ಲ ಕಾಣಿರೊ, ಬೂರಿ ದೈವರ ಗಂಡನಂಘ್ರಿಯ. ||ಕಂಡೆ ಕಂಡೆ||

ತಪ್ಪು ಕಾಣಿಕೆ , ಕಪ್ಪಗಳನು ಸಪ್ತ ದ್ವೀಪಗಳಿಂದ ತರಿಸುವ | ಉಪ್ಪು ಓಗರೆಗಳನೆ ಮಾರಿಸಿ
ಉಚಿತದಿಂದಲೆ ಹಣವಗಳಿಸುವ ಇಪ್ಪತ್ತು ದುಡ್ಡಿಗೆ ಸೇರು ತೀರ್ಥವ |ಒಪ್ಪದಲಿ ಕ್ರಯ ಮಾಡಿ ಕೊಡಿಸುವ ಸರ್ಪಶಯನನ ಸಾರ್ವಭೌಮನ
ಅಪ್ಪ ವೆಂಕಟರಮಣನಂಘ್ರಿಯ ||ಕಂಡೆ ಕಂಡೆ||

ಪುರದಿ ಸಿರಿದೇವಿ ಇರಲು ಕಂಡೆನು ಉನ್ನತದಿ ಕೌಸ್ತುಭವ ಕಂಡೆನು | ಗರುಡ ಕಿನ್ನರ ನಾರದಾದಿ
ಗಂಧರ್ವರೆಡಬಲದಿ ಕಂಡೆನು | ತೆರತೆರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಾನು ಕಂಡೆನು |
ಶರದಿ ಶಯನನ ಸಾರ್ವಭೌಮನ ವರದ ಪುರಂದರವಿಠ್ಠಲನಂಘ್ರಿಯ ||ಕಂಡೆ ಕಂಡೆ||

Lyrics in English

Kande kande swamiya bedikonde ||2times|| kande kande||

Kande tirupati venkateshana kaaranaatmaka sarvabhoumana kaamitaarthagaliva devana karunanidhi endenisi merevana ||kande kande||

Koti soorya prakashvenipa kireetavanu mastakadi kandenu| notakaashcharyavaada nagemukha nosalinali tirumaniya kandenu | saati ellade chatura hastadi shankhachakragadaabja kandenu |bootakada maatalla kaaniro, boori daivara gandanamghriya||kande kande||

Tappu kaanike kappagalannu sapta dweepagalinda tarisuva | uppu ogaregalane maarisi uchitadindale hanavagalisuva eppattu duddige seru theerthava| oppadali kraya maadi kodisuva sarpashayanana saarvabhoumana appa venkataramananghriya ||kande kande||

Puradi siridevi eralu kandenu unnatadi koustubhava kandenu| garuda kinnara naaradaadi gandharvaredabaladi kandenu| terateradi bhaktarige varagala karedu koduvudu naanu kandenu| sharadi shayanana saarvabhoumana varada purandaravithalananghriya ||kande kande||


Leave a Reply