
ಕರೆದರೆ ಓ ಎನ್ನಬಾರದೆ ಕರೆದರೆ ಓ ಎನ್ನಬಾರದೆ ಲಕ್ಶ್ಮೀರಮಣ | ಕರೆದರೆ ಓ ಎನ್ನಬಾರದೆ||
ಹಿರಣ್ಯಕನ ಉದರದಲ್ಲಿ ಬಂದ ಪ್ರಹ್ಲಾದನ | ಪರಿ ಪರಿ ದುರಿತಗಳನ್ನೆಲ್ಲ ಪರಿಹರಿಸಿ ಕಾಯ್ದಂತ ಸ್ವಾಮಿ ||1||
ಭಿಮರಥಿಯೊಳಗೊಬ್ಬ ದಾಸ ಮುನುಗಿ ಪೂಜಿಸಲು ಪೂಮಳೆ ಪೀತಾಂಬರವನ್ನು | ತೋಯದೆ ಕಾಯ್ದಂತ ಸ್ವಾಮಿ ||2||
ಅಂತ್ಯಕಾಲ ಸಮಯದಲ್ಲಿ ಅರಿಯದೆ ಅಜಮಿಳನು ಅಂತ್ಯಸುತನ ಕೂಗಲು ವೈಕುಂಠ ಪದವಿತ್ತ ಸ್ವಾಮಿ ||3||
ದುರುಳ ದುಶ್ಶಾಸನ ಬಂದು ಸೆರಗ ಪಿಡಿದು ಸೆಳೆಯುವಾಗ | ತರುಣಿ ದ್ರೌಪದಿಯ ಮಾನವನ್ನು ತ್ವರಿತದಿ ಸೆಳೆವಾಗ ಕಾಯ್ದಂತ ಸ್ವಾಮಿ||4||
ಇಂತಿಂಥ ಭಕುತರಿಗೆ ಚಿಂತೆಯ ಪರಿಹರಿಸಿ | ಕಂತುಪಿತ ಪುರಂದರ ವಿಠ್ಠಲ ನಿಂತು ಕಾಯ್ದಂತ ಸ್ವಾಮಿ ||5||
Lyrics in English
Karedare o ennabaarade karedare o ennabaarade || lakshmiramana | karedare o ennabaarade |
Hiranyakana udaradalli banda prahlaadana || pari pari duritagalannella pariharisi kaaydanta swaami ||1||
Bhimarathiyolagobba daasa munugi pogisalu | poomaale peetaambaravannu | toyade kaaydanta swaami ||2||
Antyakaala samayadalli ariyade ajamilanu | antyasutana koogalu vaikunta padavitta swaami ||3||
Durula dushyaasana bandu seraga pididu seleyuvaaga | taruni droupadiya maanavanu tvaritadi selevaaga kaaydanta ||4||
Intinta bhakutarige chinteya pariharisi | kantupita purandara vithala nintu kaaydanta swami ||5||