
ಕಲಿಯುಗದ ಮಹಿಮೆಯನು ಕಾಣಬೇಕಿಂತು ||
ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |ಗುರುಹಿರಿಯರೊಳು ದೋಷವೆಣಿಸುತಿಹರು |
ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |ತರುಣಿಯರ ನುಡಿಗಳನು ಲಾಲಿಸುತ್ತಿಹರು ||
ಕಂಡುದನೆ ಹೇಳರು ಕಾಣದನೆ ಹೇಳುವರು |ಉಂಡ ಮನೆಗೆರಡನ್ನೆ ಎಣಿಸುತಿಹರು ||
ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |ದಂಡಿಸುವರಿಂಗೆ ಧನಗಳನು ಕೊಡುತಿಹರು ||
ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |ಒಳ್ಳೆಯವರೊಡನೆ ವಂಚನೆ ಮಾಳ್ಪರು ||
ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |ಬಲ್ಲಿದವರಿಗೆ ಬಾಯ ಸವಿಯನುಣಿಸುವರು ||
ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||
ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು ||
ಮಾಡಿದುಪಕಾರವನು ಮರೆತುಕಳೆವರು ಮತ್ತೆ |ಕೂಡಾಡಿ ಬೇಡುವರು ಕುಟಿಲತ್ವದಿಂದ ||
ರೂಢಿಗೊಡೆಯನು ನಮ್ಮ ಪುರಂದರವಿಠಲನ |ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ ||
Lyrics in English
Kaliyugada mahimeyu kanabantigajalajaksha melgiriya srivenkatesha ||pa||
Harikatheyane bittu hinanudi nudiyuvaru
Guruhiriyara dushisalu enisuvaru
Poreda taytandegala matugala mannisade
Taruniyara nudigelaliccisuttiharu ||1||
Pattadarasiya bittu parasatiya bayasuvaru
Kotta salava nungikolaleniparu
Mutti basheya kottu mosavane maduvaru
Bittu paradaivavanu marigeraguvaru ||2||
Kandudanu helaru kanadane peluvaru
Unda manegeradannu bageyuttaliharu
Kondadi bedidaru kodarondu ruvviyanu
Dandisi keluvarige dhanava kodutiharu ||3||
Kallarolu atisneha sullarolu soluvaru
Olleyavarodane vanchaneya maduvaru
Illada anatharige ishtondanikkaru
Ballidage bayasaviyanunisuvaru ||4||
Madidupakaravanu maretukombaru matte
Kudale kaduvaru kapatatvadinda
Rudhiyolage namma puranmdaravithalanna
Padipogaluvariginnara Bayavilla ||5||