
ಕಾದನಾ ವತ್ಸವ ಹರಿ ಕಾದನಾ |
ಮೋದದಿಂದ ಮಾಧವ
ವೇದವೇದ್ಯ ಸಾಧುವಿನುತ ರಾದಿಕಾ ರಮಣ ಕೃಷ್ಣ | ಕಾದನಾ ವತ್ಸವ ಹರಿ ಕಾದನಾ
ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ ||
ಕೊಳಲು ಕೈಲಿ ಪಿಡಿದು ಮುರಳಿಗಾನ ಮಾಡುತ್ತಾ ||
ತನ್ನ ಸೆರಗು ತೆಗೆದು ಕೃಷ್ಣ ಕರುಗಳ ಬೆನ್ನೊರಿಸಿ |
ತಿನ್ನು ತಿನ್ನು ಪುಲ್ಲು ಎನುತ ಘನ್ನ ಕರುಗಳೊತ್ತುತ್ತ ||
ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು ||
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು||
ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು |
ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು ||
ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ |
ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ||
ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು |
ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ ||
Lyrics in English
Kaadana vatsava hari kaadana | modadinda madhava ||
Vedavedya sadhuvinuta raadikaa ramana krishna |
eleya garike iruva staladi neredu vatsagalane nilisi | kolalu kaili pididu muraligaana maaduttaa ||
Tanna seragu tegedu krishna karugala bennorisi | tinnu tinnu hullu enuta ghanna karugalottutta ||
Udugalante karagalu naduve chandra dhareyolu | podaviyolage belagalu a mrudanu kondaadalu ||
Ondu tindala karugalu indireshanu meyisalu |bandu varusha karugalante anandadinda beledavu ||
Kanaka rajata sarapali danakarugala koralalli | inukuvantaralele aneka naada berelali maaduta ||
ajagalaahnga edda karugalu gajagalaahnga adavu | trijagadodeya vijayavittala vajrake doreyaaluva ||