
ಕೂಸು ಕಂಡೆವಮ್ಮಅಮ್ಮ ನಿಮ್ಮ ಕೂಸು ಕಂಡೆವಮ್ಮ ||ಕೂಸು||
ಕಾಸಿಗೆ ವೀಸದ ಬಡ್ಡಿ ಗಳಿಸಿಕೊಂಡು
ಶೇಷಗಿರಿಯ ಮೇಲೆ ವಾಸವಾಗಿದ್ದಾನೆ ||ಕೂಸು||
ವಂಚಿಸಿ ಬಲೆಯೊಳ್ ಪ್ರಪಂಚವೆಲ್ಲ ಸೆಳೆದು
ಕಂಚಿ ಪಟ್ಟಣದಲಿ ಬಲು ಮಿಂಚಾಗಿದ್ದಾನೆ ||ವಂಚಿಸಿ||
ಗುಡ್ಡ ಬೆರಳಲಿ ಎತ್ತಿ ದೊಡ್ಡಿ ಗೋವ್ಗಳ ಕಾಯ್ದ
ಒಡ್ಡಿ ಜಗನ್ನಾಥ ಗಿಡ್ಡಾಗಿದ್ದಾನೆ ||ಕೂಸು||
ದುಡುಕು ಮಾಡಿ ಹಾಲು ಮಡಕೆಗಳನ್ನೊಡೆದು
ಹಡಗನೇರಿ ಬಂದು ಉಡುಪಿಲಿ ಇದ್ದಾನೆ ||ದುಡುಕು||
ಮಂಗಳರೇಖೆ ಪಾದಂಗಳುಳ್ಳ ನಿಮ್ಮ
ರಂಗ ಪುರಂದರವಿಠಲ ಶ್ರೀ ಕೃಷ್ಣ ||ಮಂಗಳ||
ರಂಗ ಪುರಂದರವಿಠ್ಠಲ ಶ್ರೀ ಕೃಷ್ಣಾ… ||ಕೂಸು||
Lyrics in English
Koosu kandevamma amma
nimma koosu kandevamma a|| koosu ||
kasige visada baddi galisikondu
sheshagiriya mele vasavagiddane || koosu ||
Vanchisi `baleyol prapanchavella seledu |
kanchi pattanadalli balu michagiddane |
gudda beralali etti doddi govgala kayda |
oddi jagannatha giddagiddane || koosu ||
Duduku Madi halu madakegalannodedu
hadaganeri bandu udupili iddane |
mangalarekhe paadangalulla nimma
Ranga puranadaravittala Sri Krishna ||