
ಕಂಡು ಧನ್ಯನಾದೆ ಗುರುಗಳ – ಕಣ್ಣಾರೆ ನಾ
ಕಂಡು ಧನ್ಯನಾದೆ ಈ ಗುರುಗಳ || ಪ ||
ತುಂಗಾತಟದಿ ಬಂದು ನಿಂತ
ಪಂಗು ಬಧಿರಾದ್ಯ೦ಗ ಹೀನರ
ಆಂಗಗೈಸಿ ಸಲಹುವಾ – ನರ
ಸಿಂಗನಂಘ್ರಿ ಭಜಕರಿವರ || ೧ ||
ಗುರುವರ ಸುಗುನೆಂದ್ರರಿಂದ
ಪರಿಪರಿಯಲಿ ಸೇವೆಗೊಳುತ
ವರಮಂತ್ರಾಲಯಪುರದಿ ಮೆರೆವ
ಪರಿಮಳಾಖ್ಯ ಗ್ರ೦ಥಕರ್ತರ || ೨ ||
ಸೋಹಂ ಎನ್ನದೆ ಹರಿಯ ದಾ
ಸೋಹಂ ಎನ್ನಲು ಒಲಿದು ವಿಜಯ
ಮೋಹನ ವಿಠ್ಠಲನ್ನ ಪರಮ
ಸ್ನೇಹದಿಂದ ತೋರುವವರ || ೩ ||
Lyrics in English
Kandu dhanyanade gurugala kannare na
Kandu dhanyanade namma I gurugala ||
Tungatatadi bandu ninta
Pangu badhiradyangahinara
Angagaisi salahuva narasinganangri
Bajakarivara || 1 ||
Guruvara sugunendrarinda
Paripariyali sevegoluta
Varamantralayapuradi mereva
Parimalakya granthakartara || 2 ||
Soham ennade hariya dasoham ennalu olidu
Vijaya mohanavithalana parama snehadinda toruvavara || 3 ||